ಯಾದಗಿರಿ: ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ೧೦ ಕೋಟಿಗೂ ಅಧಿಕ ಸದಸ್ಯತ್ವ ಮಾಡುವ ಗುರಿ ಹೊಂದಲಾಗಿದೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ ಹೇಳಿದರು.
ನಗರದ ಮೈಲಾಪುರ ಆಂಜನೇಯ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟಾçದ್ಯಂತ ೧೦ ಕೋಟಿಗೂ ಅಧಿಕ ಸದಸ್ಯತ್ವ ಮಾಡುವ ಉz್ದೆÃಶ ಹೊಂದಿದ್ದು, ಹಿಂದುಳಿದ ವರ್ಗಗಳಿಗೆ ವಿಶೇಷ ಯೋಜನೆ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದರು.
ರಾಷ್ಟಿçÃಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ೬ ಲಕ್ಷ ಮತ್ತು ಪ್ರತಿ ಬೂತ್ ಮಟ್ಟದಲ್ಲಿ ೩೦೦ಕ್ಕೂ ಹೆಚ್ಚು ಸದಸ್ಯತ್ವವನ್ನು ಮಾಡಲಾಗುವುದು ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಪಾಟೀಲ್, ನಗರಸಭೆ ಸದಸ್ಯ ಹಣಮಂತ ಇಟ್ಟಗಿ, ಸ್ವಾಮಿದೇವ ದಾಸನಕೇರಿ, ಮಹದೇವಮ್ಮ ಬಿರುನೂರ, ಮಾಜಿ ನಗರಸಭೆ ಮಾಜಿ ಉಪಾಧ್ಯಕ್ಷೆ ಪ್ರಭಾವತಿ ಕಲಾಲ, ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ ದೊಡ್ಡಮನಿ, ಮಲ್ಲಿಕಾರ್ಜುನ ಕಟ್ಟಿಮನಿ, ಮಂಜುನಾಥ ಜಡಿ, ಶರಣುಗೌಡ ಅಲಿಪುರ, ಮಹಾದೇವಪ್ಪ ಗಣಪುರ, ಸಾಬು ಚಂಡ್ರಕಿ, ಅಜೇಯ ಮಡ್ಡಿ, ಮಲ್ಲಿಕಾರ್ಜುನ ಕಟ್ಟಿಮನಿ, ಮಲ್ಲು ಕೋಲಿವಾಡ ಇತರರಿದ್ದರು.