ಚಾಮರಾಜನಗರ: ನಂಜನಗೂಡಿನ ಬಿ.ಪಿ.ಪಂಡಿತರ ಶ್ರೀಧನ್ವಂತರಿ ಆರೋಗ್ಯ ಆಶ್ರಮ ಟ್ರಸ್ಟ್ ಮತ್ತು ಚಾಮರಾಜನಗರ ರೋಟರಿ ಸಿಲ್ಕ್‌ಸಿಟಿ ಸಹಯೋಗದಲ್ಲಿ ೆ.18 ರಂದು ಆರ್ಯುವೇದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ನಗರದ ನಂದಿ ಭವನದಲ್ಲಿ ಬೆಳಗ್ಗೆ 10-3 ಗಂಟೆಯ ವರೆಗೆ ಶಿಬಿರ ನಡೆಯಲಿದೆ. ಶ್ರೀಧನ್ವಂತರಿ ಆರೋಗ್ಯ ಆಶ್ರಮದ ಡಾ.ಗೀತಾ, ಡಾ.ಕೃಷ್ಣ, ಡಾ.ಸುಶ್ಮಿತಾ ಹಾಗೂ ಡಾ.ವರ್ಷಿಣಿ ಅವರು ಶಬಿರದಲ್ಲಿ ಭಾಗವಹಿಸಿ ಆರೋಗ್ಯ ಸಮಸ್ಯೆ ಕುರಿತು ಉಚಿತವಾಗಿ ಆರ್ಯುವೇದ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಈ ಶಿಬಿರದಲ್ಲಿ ಗುಣಮಟ್ಟದ ಎಲ್ಲಾ ವಿಧವಾದ ಆರ್ಯುವೇದ ಔಷಧ ದೊರೆಯಲಿದೆ.
ಈ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಿಬಿರದ ಸಂಚಾಲಕರಾದ ದೊಡ್ಡರಾಯಪೇಟೆ ಗಿರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಎಚ್.ಜಿ.ಕುಮಾರಸ್ವಾಮಿ ಮೊ.9880933607 ಮತ್ತು ಡಿ.ಎಸ್.ಗಿರೀಶ್ ಮೊ.9538533818 ಸಂಪರ್ಕಿಸುವಂತೆ ಕೋರಿದೆ.