ಜಿಲ್ಲೆ

ಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ

ಬಳ್ಳಾರಿ: ಕಾಂಗ್ರೆಸ್ ಸರ್ಕಾರ ರೈತ ಉತ್ಪಾದಕ ಸಂಸ್ಥೆಗಳಿಗೆ ಅನುದಾನ ನೀಡುತ್ತಿಲ್ಲ ಎಂದು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ಸೋಮವಾರ ಪ್ರತಿಭಟಿಸಿತು.
ವರ್ಷಕ್ಕೆ ಎರಡು ಕಂತುಗಳಲ್ಲಿ ನಾಲ್ಕು ಸಾವಿರ ರೂ. ನೀಡಬೇಕಾದ ಕೃಷಿ ಸಮ್ಮಾನ್ ಯೋಜನೆ ಸ್ಥಗಿತಗೊಳಿಸಿದೆ. ರೈತ ಮಕ್ಕಳಿಗೆ ಅನುಕೂಲವಾಗುವ ವಿದ್ಯಾನಿಧಿ ಹಾಗೂ 1500 ರೂ. ಗಳ ರೈತ ಶಕ್ತಿ ಯೋಜನೆ, ಭೂ ಸಿರಿ ಯೋಜನೆಯನ್ನು ನಿಲ್ಲಿಸಿದೆ. ಕೆಲ ಬೆಳೆಗಳಿಗೆ ಬರ ಪರಿಹಾರ ನೀಡುವಲ್ಲಿ ತಾರತ್ಯಮ ಮಾಡುತ್ತಿರುವುದು. ರೈತರ ಹಾಲಿನ ಬೆಲೆ ಹೆಚ್ಚಿಸಿದ್ದು, ರೈತರಿಗೆ ಪ್ರೋತ್ಸಾಹ ಧನ ನೀಡದಿರುವುದು. ಇ ಸ್ಟಾಂಪ್ ಹಾಗೂ ಕಾಗದ ಪತ್ರಗಳ ದರ ಐದು ಪಟ್ಟು ಹೆಚ್ಚಿಸಿ ರೈತರಿಗೆ ತೊಂದರೆ ಮಾಡಿದೆ. ರೈತ ಬೆಳೆದ ಬೆಳೆಗಳಿಗೆ ಮಾರಾಟ ಮಾಡಲು ಮೊದಲು ಯಾವುದೇ ಸರಬಾರಜು, ಸಾಗಣಿಕೆ ಮಾಡಲು ಯಾವುದೇ ತೆರಿಗೆಗಳು ಇದ್ದಿಲ್ಲ. ಆದರೆ, ಈಗಿನ ಸರ್ಕಾರವು ಪ್ರತಿಯೊಂದು ಬೆಳೆಗಳಿಗೆ ಆರ್‌ಎಂಸಿ ತೆರಿಗೆಗಳ ಅಳವಡಿಸಿದೆ ಎಂದು ಪ್ರತಿಭಟನಕಾರರು ಅಕ್ರೋಶ ಹೊರಹಾಕಿದರು. ಈ ಮೇಲಿನ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಕೂಡಲೇ ಬಗೆಹರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.