ಜಿಲ್ಲೆ

ಹ್ಯಾಂಡ್​ಬಾಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ಮನೋಜ್

ರಾಣೆಬೆನ್ನೂರ: ಕರ್ನಾಟಕ ಹ್ಯಾಂಡ್​ಬಾಲ್ ಅಸೋಸಿಯೇಷನ್ ಅಧ್ಯಕ್ಷರನ್ನಾಗಿ ನಗರದ ಓಂ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ. ಮನೋಜ್ ಸಾವಕಾರ ಅವರನ್ನು ನೇಮಕ ಮಾಡಿ ಅಖಿಲ ಭಾರತ ಹ್ಯಾಂಡ್​ಬಾಲ್ ಫೆಡರೇಷನ್ ಆಫ್ ಇಂಡಿಯಾ (ಎಚ್​ಎಫ್​ಐ) ಸಂಸ್ಥೆ ಆದೇಶ ಹೊರಡಿಸಿದೆ.

ಈ ಕುರಿತು ಮನೋಜ್ ಸಾವುಕಾರ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಸೋಸಿಯೇಷನ್​ಗೆ ವಿನೋದ ಎಸ್., ಕೆ.ಜಿ. ಮಾದಪ್ಪ ಅವರನ್ನು ಉಪಾಧ್ಯಕ್ಷ, ಬಿ.ಎಲ್. ಲೋಕೇಶ ಕಾರ್ಯದರ್ಶಿ, ಡಾ. ಕೆ. ರಾಘವೇಂದ್ರ ಜಂಟಿ ಕಾರ್ಯದರ್ಶಿ, ಪ್ರಕಾಶ ನರಗಟ್ಟಿ ಅವರನ್ನು ಖಜಾಂಚಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಹ್ಯಾಂಡ್​ಬಾಲ್​ಅನ್ನು ಗ್ರಾಮಮಟ್ಟದಿಂದ ಬೆಳೆಸುವುದು ನಮ್ಮ ಧ್ಯೇಯವಾಗಿದೆ. ಗ್ರಾಮೀಣ ಭಾಗದಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಪಟುಗಳಿದ್ದು, ಅವರಿಗೆ ಹ್ಯಾಂಡ್​ಬಾಲ್ ತರಬೇತಿ ಶಿಬಿರ ಏರ್ಪಡಿಸುವ ಮೂಲಕ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಶೀಘ್ರದಲ್ಲಿಯೇ ಹೊನ್ನಾಳಿ ಹಿರೇಕಲ್ಮಠದಲ್ಲಿ ಪಂದ್ಯಾವಳಿ ಏರ್ಪಡಿಸಲಾಗುವುದು ಎಂದರು.

ಕಾರ್ಯದರ್ಶಿ ಬಿ.ಎಲ್. ಲೋಕೇಶ, ಖಜಾಂಚಿ ಪ್ರಕಾಶ ನರಗಟ್ಟಿ, ಮಾಜಿ ಸೇನಾಧಿಕಾರಿ ಸುರೇಶ ರಾಘವನ್, ಡಾ. ಕೆ. ರಾಘವೇಂದ್ರ, ಮಾದಪ್ಪ ಕೆ.ಜಿ., ವಿನೋದ ಎಸ್., ಡಾ. ಅರುಣಕುಮಾರ ಚಂದನ್, ಸುನೀಲ ಅಗರವಾಲ ಇತರರು ಸುದ್ದಿಗೋಷ್ಠಿಯಲ್ಲಿದ್ದರು.