ವೀರಾಜಪೇಟೆ: ಆಟೋರಿಕ್ಷಾ ಚಾಲಕರು ಹೋರಾಟದಿಂದ ಮಾತ್ರ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯಎಂದು ಜೈ ಭಾರತ್ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎನ್.ಎನ್. ಶಿವು ಹೇಳಿದರು.ಜೈ ಭಾರತ್ ಆಟೋ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ನಗರದ ಮಹಿಳಾ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
ಸಂಘ ಸ್ಥಾಪನೆಯಾಗಿ ಒಂದು ವರ್ಷದಲ್ಲಿ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ನಡೆಸಿದೆ. ಆಟೋ ಚಾಲಕರು ಸಂಘದ ಸದಸ್ಯತ್ವ ಪಡೆದು ಸಹಕಾರ ನೀಡಬೇಕು ಎಂದವರು ಮನವಿ ಮಾಡಿದರು. ಸಂಘದ ಗೌರವಾಧ್ಯಕ್ಷ ತೊರೇರ ಪ್ರಭು ಕುಟ್ಟಪ್ಪ ಮಾತನಾಡಿ, ಸಂಘದಲ್ಲಿ ಮರಣ ನಿಧಿ ಸ್ಥಾಪನೆ ಮಾಡಬೇಕು. ಸಂಘದ ಏಳಿಗೆಗಾಗಿ ಮಾಸಿಕ ವಂತಿಗೆ ಸಂಗ್ರಹಿಸಿದರೆ ಆರ್ಥಿಕವಾಗಿ ಸದೃಢವಾಗಬೇಕು ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಜೀವನ್, ಗೌರವ ಸಲಹೆಗಾರ ದೀಪು ಪ್ರದೀಪ್, ಖಜಾಂಚಿ ಅರ್ಜುನ್ ತಿಮ್ಮಯ್ಯ ಇತರರು ಇದ್ದರು.