ಕಮಲಾಪುರದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಹಡಪದ ಅಪ್ಪಣ್ಣ ಜಯಂತ್ಯುತ್ಸವದಲ್ಲಿ ಶಹಾಬಾದ್‌ನ ಶ್ರೀ ಬಾಲ ಬ್ರಹ್ಮಚಾರಿ ರಾಜಶಿವಯೋಗಿಗಳು, ಕಮಲಾಪುರದ ಶ್ರೀ ಶಾಂತಿವೀರ ದೇವರು, ಈರಣ್ಣ ಸನ್ನೂರ, ಬಸವರಾಜ ಹಡಪದ, ಅಬ್ದುಲï ಸತ್ತಾರ್, ಆನಂದ ವಾರಿಕ್, ರವೀಂದ್ರ ಬಿಕೆ, ನಿಂಗಪ್ಪ ಪ್ರಬುದ್ಧಕರ್ ಇತರರಿದ್ದರು. 
ಜಿಲ್ಲೆ

ಹೋರಾಟದಿAದ ಹಕ್ಕು ಪಡೆಯಲು ಸಾಧ್ಯ

ಕಮಲಾಪುರ: ಸಮಾಜ ಚಿಕ್ಕದು ಎಂಬ ಕಾರಣಕ್ಕೆ ರಾಜಕೀಯ ಪಕ್ಷಗಳು ನಮ್ಮನ್ನು ಬಳಸಿಕೊಂಡರೂ ಸ್ಥಾನಮಾನ ನೀಡದೆ ಕಡೆಗಣಿಸಿದ್ದರಿಂದ ಎಲ್ಲ ಕ್ಷೇತ್ರದಲ್ಲಿ ಹಿಂದುಳಿಯುವAತಾಗಿದೆ ಎಂದು ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷ ಈರಣಪ್ಪ ಹಡಪದ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ರೇವಣಸಿz್ದೆÃಶ್ವರ ಕಲ್ಯಾಣ ಮಂಟಪದಲ್ಲಿ ಹಡಪದ ಸಮುದಾಯ ಮಂಗಳವಾರ ಸಂಜೆ ಏರ್ಪಡಿಸಿದ್ದ ಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೋರಾಟದ ಫಲವಾಗಿ ಹಡಪದ ಅಪ್ಪಣ್ಣ ನಿಗಮ ರಚನೆಯಾಗಿದ್ದರಿಂದ ಸರ್ಕಾರದ ಸೌಲಭ್ಯ ಪಡೆಯಲು ಅನುಕೂಲವಾಗಿದೆ. ಸಮಾಜದ ಜನರು ಒಗ್ಗಟ್ಟಾಗಿ ಹೋರಾಡಿ ರಾಜಕೀಯ, ಸಾಮಾಜಿಕವಾಗಿ ಬೆಳೆಯುವುದರ ಜತೆಗೆ ಶಿP್ಷÀಣಕ್ಕೆ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು.

ಶಹಾಬಾದ್‌ನ ಬಾಲ ಬ್ರಹ್ಮಚಾರಿ ಶ್ರೀ ರಾಜಶಿವಯೋಗಿಗಳು, ಕಮಲಾಪುರದ ಶ್ರೀ ಶಾಂತಿವೀರ ದೇವರು, ಅಬಕಾರಿ ಜಂಟಿ ಆಯುಕ್ತ ಬಸವರಾಜ ಹಡಪದ, ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲï ಸತ್ತಾರ್, ಆನಂದ ವಾರಿಕ್, ನಿಂಗಪ್ಪ ಪ್ರಬುದ್ಧಕರ್, ಧನರಾಜ ಹಡಪದ ಇತರರಿದ್ದರು. ರವೀಂದ್ರ ಬಿ.ಕೆ. ನಿರೂಪಣೆ ಮಾಡಿದರು.

ಶರಣ ಹಡಪದ ಅಪ್ಪಣ್ಣ ಭಾವಚಿತ್ರದ ಮೆರವಣಿಗೆಗೆ ಶಾಸಕ ಬಸವರಾಜ ಮತ್ತಿಮಡು ಚಾಲನೆ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡೊಳ್ಳು, ಕೋಲಾಟ ಹಾಗೂ ಭಜನೆಯೊಂದಿಗೆ ಮೆರವಣಿಗೆ ಸಾಗಿತು. 12ನೇ ಶತಮಾನದ ಶರಣರ ವಚನ ಪುಸ್ತಕಗಳನ್ನು ಮಹಿಳೆಯರು ತಲೆ ಮೇಲೆ ಹೊತ್ತು ಹೆಜ್ಜೆ ಹಾಕಿದರು.