ಜಿಲ್ಲೆ

ಹೋರಾಟಗಾರರ ತ್ಯಾಗ-ಬಲಿದಾನ ಅರ್ಥೈಸಿಕೊಳ್ಳಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಶದ ಸ್ವಾತಂತ್ರೃ ಹೋರಾಟದಲ್ಲಿ ಸಹಸ್ರಾರು ದೇಶ ಭಕ್ತರ ತ್ಯಾಗ, ಬಲಿದಾನ ಇರುವುದನ್ನು ಯುವಕರು ಅರ್ಥೈಯಿಸಿಕೊಳ್ಳಬೇಕು ಎಂದು ಹಿರಿಯ ರಂಗಕರ್ಮಿ ಡಾ. ಶಶಿಧರ ನರೇಂದ್ರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಇಲ್ಲಿನ ವಿದ್ಯಾರಣ್ಯ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕರ್ನಾಟಕ ಸ್ವಾತಂತ್ರೃ ಹೋರಾಟದ ಆ ದಿನಗಳು ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಕಾಶ ಸುಣಗಾರ ಕರ್ನಾಟಕದಲ್ಲಿ ಅಸಹಕಾರ ಚಳುವಳಿ ಪ್ರಖರತೆ ಕುರಿತು ಉಪನ್ಯಾಸ ನೀಡಿ, 1919ರಲ್ಲಿ ಬ್ರಿಟಿಷರು ಜಾರಿಗೆ ತಂದ ರೌಲೆಟ್ ಶಾಸನ ಜಲಿಯನ್‌ವಾಲಾಬಾಗ್ ದುರಂತಗಳು ಭಾರತೀಯರಲ್ಲಿ ಆಳರಸರ ವಿರುದ್ಧ ಪ್ರತಿಕಾರ ಭಾವನೆ ಮೂಡಿಸಿದವು. ಗಾಂಧೀಜಿ ರಾಜಕೀಯದಲ್ಲಿ ಧುಮುಕಿ ಸತ್ಯಾಗ್ರಹ ಎಂಬ ಹೊಸ ಪರಿಕಲ್ಪನೆ ಮೂಲಕ ಶಾಂತಿಯುತ ಹೋರಾಟ ಪ್ರಾರಂಭಿಸಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾರಣ್ಯ ಕಾಲೇಜಿನ ಪ್ರಾಚಾರ್ಯೆ ಡಾ. ಶರಣಮ್ಮ ಗೋರೆಬಾಳ ಮಾತನಾಡಿ, ಅನೇಕರ ತ್ಯಾಗ, ಬಲಿದಾನದಿಂದ ಪಡೆದ ಸ್ವಾತಂತ್ರೃವನ್ನು ಸರಿಯಾದ ಮಾರ್ಗದಲ್ಲಿ ನಡೆದು ಉಳಿಸಿಕೊಂಡು ಹೋಗಬೇಕು ಎಂದರು.
ನಂದೀಶ ಕಾಖಂಡಕಿ, ವೀರಣ್ಣ ಒಡ್ಡೀನ, ಡಾ. ಡಿ.ಜಿ. ಶೆಟ್ಟಿ, ಎಂ.ಎಸ್. ನರೇಗಲ್ಲ, ಡಾ. ಭರತ ನಾಯಕ, ರಮೇಶ ಮಾಂಗ, ಕರುಣಾ ಕುಲಕರ್ಣಿ, ವಾಣಿಶ್ರೀ ಇತರರು ಇದ್ದರು.
ಶಿವಕುಮಾರ ಗಾಣಿಗೇರ ಸ್ವಾಗತಿಸಿದರು. ಸದಾನಂದ ಶಿಂತ್ರಿ ನಿರೂಪಿಸಿದರು. ಡಾ. ಸುರೇಶ ಹಾನಗಲ್ಲ ವಂದಿಸಿದರು.