ಗಂಗಾವತಿ: ನಗರದ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಎಸ್‌ಎ್ಐ ತಾಲೂಕು ಸಮಿತಿಯಿಂದ ಸ್ವಾತಂತ್ರ್ಯ ಸೇನಾನಿಗಳಾದ ಭಗತ್‌ಸಿಂಗ್, ರಾಜಗುರು ಮತ್ತು ಸುಖದೇವ ಹುತಾತ್ಮ ದಿನ ಭಾನುವಾರ ಆಚರಿಸಲಾಯಿತು.
ಹೋರಾಟಗಾರರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಸಮಿತಿ ರಾಜ್ಯ ಉಪಾಧ್ಯಕ್ಷ ಗ್ಯಾನೇಶ ಕಡಗದ್ ಮಾತನಾಡಿ, ಸ್ವಾತಂತ್ರ್ಯ ಸೇನಾನಿಗಳ ಹೋರಾಟದ ಕಿಚ್ಚು ದೇಶದ ಯುವಕರಿಗೆ ಸ್ಫೂರ್ತಿಯಾಗಬೇಕಿದೆ. ಬ್ರಿಟಿಷರ ವಿರುದ್ಧ ಹೋರಾಡಿದ ಭಗತ್ ಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ್ ಆಜಾದ್‌ರ ನಿತ್ಯ ಸ್ಮರಣೀಯರಾಗಬೇಕಿದ್ದು, ಸಿನಿಮಾ ಹೀರೋಗಳು ಸ್ಫೂರ್ತಿಯಾಗಬಾರದು ಎಂದರು. ವಕೀಲ ಶಿವಕುಮಾರ, ಸಮಿತಿ ಪದಾಧಿಕಾರಿಗಳಾದ ಬಾಲಾಜಿ, ಶರ್ೀ, ಮಹೇಶ, ವಿಜಯ್,ಹನುಮೇಶ ಇತರರಿದ್ದರು.
ಎಬಿವಿಪಿ: ನಗರದ ಬಿಸಿಎಂ ಮೆಟ್ರಿಕ್ ಪೂರ್ವ ವಸತಿ ನಿಲದಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದಿಂದ ಬಲಿದಾನ ದಿವಸ ಆಚರಿಸಲಾಯಿತು. ಸ್ವಾತಂತ್ರ್ಯ ಸೇನಾನಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಪರಿಷತ್‌ನ ರಾಜ್ಯ ಸಹ ಸಂಚಾಲಕ ಅಭಿಷೇಕ ಹಿರೇಮಠ ಮಾತನಾಡಿ, ಕ್ರಾಂತಿಕಾರಿ ಹೋರಾಟಗಾರರ ತ್ಯಾಗಬಲಿದಾನದಿಂದ ಇಂದು ಸ್ವಾತಂತ್ರ್ಯ ಪಡೆಯಲು ಸಾಧ್ಯವಾಯಿತು ಎಂದರು. ಬಿಸಿಎಂ ತಾಲೂಕು ವಿಸ್ತೀರ್ಣಾಧಿಕಾರಿ ಉಷಾಮುಜುಂದಾರ್, ಪರಿಷತ್ ಪದಾಧಿಕಾರಿಗಳಾದ ಕಿರಣಕುಮಾರ, ಪೃಥ್ವಿರಾಜ, ಉದಯಕುಮಾರ, ಗಣೇಶ, ಹಾಸ್ಟೇಲ್ ಮೇಲ್ವಿಚಾರಕ ಮಲ್ಲಿಕಾರ್ಜುನ ಇತರರಿದ್ದರು.
ಕ್ರಾಂತಿ ಚಕ್ರ ಬಳಗ: ನಗರದ ಕ್ರಾಂತಿಚಕ್ರ ಬಳಗದ ಕಚೇರಿಯಲ್ಲಿ ದುಡಿಯುವ ವರ್ಗಗಳ ವೇದಿಕೆಯಿಂದ ಭಗತಸಿಂಗ್, ರಾಜಗುರು, ಸುಖದೇವ್ ಹುತಾತ್ಮದಿನ ಆಚರಿಸಲಾಯಿತು. ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಪಣೆ ಸಲ್ಲಿಸಿದ ಕ್ರಾಂತಿಚಕ್ರ ಬಳಗದ ಅಧ್ಯಕ್ಷ ಜೆ.ಭಾರಧ್ವಾಜ್ ಮಾತನಾಡಿದರು. ವಿವಿಧ ಸಂಘಟನೆ ಪದಾಧಿಕಾರಿಗಳಾದ ಯಾಜ್, ವಿಜಯ್ ದೊರೈರಾಜು, ಚಾಂದ್‌ಪಾಷಾ, ಮಹೆಬೂಬಸಾಬ ಲಾಟಿ, ಹನುಮಂತ, ಚೌಡಪ್ಪ, ಮಂಡಿ ವಿರೇಶ, ಸೋಮು, ರಸೂಲ್, ಖಾದರಭಾಷಾ, ನಿರುಪಾದಿ, ಮರಿಸ್ವಾಮಿ ಇತರರಿದ್ದರು.