ಜಿಲ್ಲೆ

ಹೋರಾಟದಲ್ಲಿ ಸ್ತ್ರೀಯರು ಭಾಗಿಯಾಗಲಿ

ರಟ್ಟಿಹಳ್ಳಿ: ರೈತರಿಗೆ, ಮಹಿಳೆಯರಿಗೆ, ಹಿಂದುಳಿದ ವರ್ಗದವರಿಗೆ ಸರ್ಕಾರದ ಅನೇಕ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಲು, ಸಾಮಾಜಿಕ ನ್ಯಾಯ ಒದಗಿಸಲು ಮಹಿಳೆಯರು ಸಂಘಟನೆಯ ಮೂಲಕ ಹೋರಾಟಗಳಲ್ಲಿ ಭಾಗವಹಿಸಬೇಕು ಎಂದು ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ಎಸ್. ಅಕ್ಕಿ ಹೇಳಿದರು.

ತಾಲೂಕಿನ ಮಾವಿನತೋಪ ಗ್ರಾಮದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಮಹಿಳಾ ಗ್ರಾಮ ಘಟಕವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಸಂಕಷ್ಟದಲ್ಲಿದ್ದಾರೆ. ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಎಂದು ರೈತರು ತಿಳಿದುಕೊಳ್ಳಬೇಕು. ಆತ್ಮವಿಶ್ವಾಸದಿಂದ ಬದುಕು ಸಾಗಿಸಬೇಕು. ತಮ್ಮನ್ನು ನಂಬಿ ಕುಟುಂಬ ಇರುತ್ತದೆ ಎಂಬ ಅರಿವು ಇರಬೇಕು ಎಂದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಮಹಿಳೆಯರು ಅಡುಗೆ ಮನೆಗಳಿಗೆ ಮಾತ್ರ ಸೀಮಿತವಲ್ಲ. ಜನರ ಕಷ್ಟ, ನಲಿವುಗಳಲ್ಲಿ ಮಹಿಳೆಯರು ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದರು.

ಪ್ರೇಮಲಮ್ಮ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಗ್ರಾಮ ಘಟಕ ಅಧ್ಯಕ್ಷೆ ಸರೋಜಾ ಬನ್ನಿಕೋಡ, ಶಾಂತಮ್ಮ ಕರ್ಜಗಿ, ಸುಮಾ ಪುರದ, ರತ್ನಾ ನರೇಂದ್ರ, ಗಂಗಮ್ಮ ಪಾಟೀಲ, ರತ್ನಾ ಮಲ್ಲನಗೌಡ, ಸುಮಿತ್ರಾ ಗಾಣಗೇರ, ಸವಿತಾ ತಳವಾರ, ಶಾಂತಾ ಹೊಳಿಯಪ್ಪನವರ, ವಿಶಾಲಾಕ್ಷಿ ಮತ್ತೂರ, ಬಸನಗೌಡ ಗಂಗಪ್ಪನವರ, ಶಂಕ್ರಪ್ಪ ಶಿರಗಂಬಿ, ಶಂಭಣ್ಣ ಮುತ್ತಗಿ, ಕರಬಸಪ್ಪ ಬಸಾಪುರ, ಸಂಘಟನೆಯ ಸದಸ್ಯರು ಇದ್ದರು.