ಹೊಸೂರು: ಹೊಸೂರು ಮಹಾನಗರ ಪಾಲಿಕೆ ಚುನಾವಣೆ ಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಯಾರಿಗೂ ಬಹುಮತ ದೊರಕಿಲ್ಲ. ಪಾಲಿಕೆ 45 ಸ್ಥಾನ ಹೊಂದಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು 23 ಸದಸ್ಯರ ಬಲ ಬೇಕಿದೆ. ಸದ್ಯ ಡಿಎಂಕೆ 21, ಅಣ್ಣಾ ಡಿಎಂಕೆ 16, ಪಕ್ಷೇತರರು 5, ಕಾಂಗ್ರೆಸ್ 1, ಪಿಎಂಕೆ 1, ಬಿಜೆಪಿ 1 ಸ್ಥಾನದಲ್ಲಿ ಗೆಲುವು ದಾಖಲಿಸಿದೆ.
ಡಿಎಂಕೆ ಪಕ್ಷದ ಆರ್ಮುಗಂ, ರವಿ, ಮಮತಾ, ಆನಂದಯ್ಯ, ಶ್ರೀನಿವಾಸಲು, ಕೃಷ್ಣಪ್ಪ, ಆಂಜಿನಪ್ಪ, ಮಾರಕ, ಪೆರ್ಮಾಳ್, ಯಶಸ್ವಿನಿ, ವೆಂಕಟೇಶ್, ಡಾ.ಶ್ರೀಲಕ್ಷ್ಮೀ, ನಾಗರಾಜ್, ಶಶಿದೇವಿ, ಮಾದೇಶ್, ಮಾದೇಶ್ವರನ್, ಸತ್ಯ, ಮೋಸಿನ್ ತಾಜ್, ವರಲಕ್ಷ್ಮೀ, ಚನ್ನೆರಪ್ಪ, ಮಂಜುಳಾ, ಅಣ್ಣ ಡಿಎಂಕೆಯಿಂದ ಅಶೋಕ್ ರೆಡ್ಡಿ, ಶ್ರೀಧರ್, ರಜನಿಕಾಂತ್, ಶಿವರಾಂ, ಮಂಜುನಾಥ್, ಶಿಲ್ಪಾ, ನಾರಾಯಣನ್, ಪುರುಷೋತ್ತಮ್, ದಿಲ್ಸತ್ ರೆಹಮಾನ್, ಕೃಷ್ಣವೇಣಿ, ಪುಷ್ಪಾ, ಮರ್ಗಮ್ಮ, ಲಕ್ಷ್ಮೀ, ಜೈಪ್ರಕಾಶ್, ಕುಬೇರನ್, ಕಲಾವತಿ, ಕಾಂಗ್ರೆಸ್‌ನಿಂದ ಇಂದ್ರಾಣಿ, ಪಿಎಂಕೆಯಿಂದ ಗಾಂಧಿಮತಿ ಕಣ್ಣನ್, ಬಿಜೆಪಿಯಿಂದ ಪಾರ್ವತಿ ನಾಗರಾಜ್, ಸ್ವತಂತ್ರ ಅಭ್ಯರ್ಥಿಗಳಾಗಿ ಮಂಜಮ್ಮ, ದೇವಿ ,ಮಲ್ಲಿಕಾ, ಕೌಸಸ್ ಭಾನು ಮತ್ತು ಭಾಗ್ಯಲಕ್ಷ್ಮೀ ಜಯಗಳಿಸಿದ್ದಾರೆ.
ಪಕ್ಷೇತರರ ಕಾರುಬಾರು: ಕೆಲಮಂಗಳ ಪಪಂ ಚುನಾವಣೆಯಲ್ಲಿ ಪಕ್ಷೇತರರು ಆರು ಸ್ಥಾನ ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಡಿಎಂಕೆ ಕೇವಲ ಎರಡು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದ್ದರೆ, ಎಐಎಡಿಎಂಕೆ 5 ಸ್ಥಾನ ಗಳಿಸಿ, 2ನೇ ಸ್ಥಾನದಲ್ಲಿದೆ. ಪಿಎಂಕೆ, ಸಿಪಿಐನ ತಲಾ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಕೆಲಮಂಗಳ ಪಟ್ಟಣ ಪಂಚಾಯಿತಿ ಒಟ್ಟು 15 ಸದಸ್ಯ ಬಲ ಹೊಂದಿದ್ದು, ಬಹುಮತಕ್ಕೆ 8 ಸ್ಥಾನಗಳು ಬೇಕು. ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಅಧಿಕಾರ ಹಿಡಿಯಲು ಪಕ್ಷೇತರರಿಗೆ ಡಿಎಂಕೆ ಬೆಂಬಲ ಕೊಡುವ ಸಾಧ್ಯತೆ ಇದೆ. ಸಿಪಿಐ ಮತ್ತು ಪಿಎಂಕೆ ಬೆಂಬಲವೂ ಇವರಿಗೆ ಸಿಗುವ ಎಲ್ಲ ಸಾಧ್ಯತೆಗಳಿವೆ. 5 ಸ್ಥಾನಗಳನ್ನು ಗೆದ್ದಿರುವ ಎಐಎಡಿಎಂಕೆ ಕೂಡ ಅಧಿಕಾರ ಹಿಡಿಯಲು ಪಕ್ಷೇತರರನ್ನು ಸೆಳೆಯುವ ಪ್ರಯತ್ನ ಆರಂಭಿಸಿದೆ.
ಡೆಂಕಣಿಕೋಟೆ ಪಪಂ ಡಿಎಂಕೆ ವಶ: ಡೆಂಕಣಿಕೋಟಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಡಿಎಂಕೆ ಬಹುಮತ ಸಾಧಿಸಿದೆ. ಒಟ್ಟು 18 ಸದಸ್ಯ ಬಲ ಹೊಂದಿರುವ ಪಟ್ಟಣ ಪಂಚಾಯಿತಿಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು 10 ಸ್ಥಾನಗಳ ಅಗತ್ಯವಿತ್ತು. 13 ಸ್ಥಾನಗಳನ್ನು ಗೆಲ್ಲುವ ಮೂಲಕ ಡಿಎಂಕೆ ಪಟ್ಟಣ ಪಂಚಾಯಿತಿಯ ಆಡಳಿತ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ.
ಮಂಗಳವಾರ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಡಿಎಂಕೆಯ ನಾಗಲಕ್ಷ್ಮೀ ಕೃಷ್ಣನ್, ಸುಮತಿ, ರಹೀನಾ ಬೇಗಂ, ನಜೀಮಾ ಅಬ್ದುಲ್ ಖಾದರ್, ಅಬ್ದುಲ್ ಕಲಾಂ, ಮಣಿವಣ್ಣನ್, ಲಿಂಗೋಜಿರಾವ್, ಪ್ರೇಮಾ, ಶ್ರೀಧರ್‌ವಿಜೇತರಾಗಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದ ಶ್ರೀನಿವಾಸ್ ಸೇರಿ 13 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಮಾಮಾ ಶರ್ೀ, ಎಐಎಡಿಎಂಕೆಯ ಮಧು, ಬಿಜೆಪಿಯ ಸಂಜನಾ, ಸಿಪಿಎಂನ ಜಯಂತ್, ಐಎಂಕೆಯ ಅಬ್ದುಲ್ ರೆಹಮಾನ್ ಕೂಡ ಗೆಲುವು ಸಾಧಿಸಿದ್ದಾರೆ.