ಜಿಲ್ಲೆ

ಹೊಸತೋಟ ಸರ್ಕಾರಿ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ

ಸೋಮವಾರಪೇಟೆ: ತಾಲೂಕಿನ ಹೊಸತೋಟ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮ ಈಚೆಗೆ ನಡೆಯಿತು.

ಶಾಲಾ ಮುಖ್ಯ ಶಿಕ್ಷಕಿ ಕೆ.ಎಂ. ಪವಿತ್ರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜಗತ್ತಿನಲ್ಲಿ ವಿಜ್ಞಾನದ ನೂತನ ಅವಿಷ್ಕಾರಗಳಿಂದ ಹಲವು ಪ್ರಯೋಜನಗಳನ್ನು ನಾವು ಪಡೆಯುತ್ತಿದ್ದೇವೆ. ಯಾವುದೇ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡರೂ, ಅದು ವಿಜ್ಞಾನದ ಒಂದು ಭಾಗವಾಗಿರುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿಜ್ಞಾನದ ವಿಷಯದಲ್ಲಿ ಹೆಚ್ಚಿನ ಆಸಕ್ತಿಯಿಂದ ಶಿಕ್ಷಣ ಪಡೆಬೇಕು. ವೈಜ್ಞಾನಿಕ ತಳಹದಿಯಲ್ಲೇ ವಿದ್ಯಾಭ್ಯಾಸ ಮುಂದುವರಿಸಬೇಕು ಎಂದು ಕಿವಿಮಾತು ಹೇಳಿದರು.

ಮಕ್ಕಳಿಂದ ತಯಾರಿಸಲಾದ ವಿಜ್ಞಾನ ಮಾದರಿಗಳು, ಚಿತ್ರ ಪಟಗಳ ಪ್ರದರ್ಶನದೊಂದಿಗೆ ವಿಜ್ಞಾನಕ್ಕೆ ಸಂಬಂಧಪಟ್ಟ ಅನೇಕ ಮಾಹಿತಿಯನ್ನು ಶಾಲಾ ಮಕ್ಕಳಿಗೆ ತಿಳಿಸಿಕೊಡಲಾಯಿತು.

ಈ ಸಂದರ್ಭ ಶಾಲಾ ಶಿಕ್ಷಕರಾದ ಸವಿತಾ, ಮಮತಾ, ನಂದಿತಾ, ಕೆಂಚವ್ವ, ಹೇಮಾವತಿ, ಅಂಜಲಿಕಾ, ಲಿನಿತಾ, ಬಿಬಿನ್ ಕುಮಾರ್ ಅವರು ವಿಜ್ಞಾನ ಮಾದರಿ ತಯಾರಿಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.