ಕಲಬುರಗಿ: ಸಿಡಿಪಿ ಯೋಜನೆ ವಿಳಂಬದಿAದಾಗಿ ಕಲಬುರಗಿ ನಗರದ ಅಭಿವೃದ್ಧಿ ಕುಂಠಿತಗೊAಡಿದೆ. ಹೀಗಾಗಿ ಯೋಜನೆಗೆ ಶೀಘ್ರ ಮಂಜೂರಿ ನೀಡುವಂತೆ ಕಾನ್ಫಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಆರ್‌ಇಡಿಎಐ) ಆಗ್ರಹಿಸಿದೆ.
ಕ್ರೆಡೈ ನಿಯೋಗ ಬೆಂಗಳೂರಿಗೆ ತೆರಳಿ ವಿವಿಧ ಖಾತೆ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಮನವಿ ಸಲ್ಲಿಸಿ, ೧೧.೫ ಮೀಟರ್ ಸೆಟ್‌ಬ್ಯಾಕ್‌ನೊಂದಿಗೆ ನಗರದಲ್ಲಿ ಕಟ್ಟಡದ ಎತ್ತರ ನಿಗದಿಪಡಿಸಲಾಗಿದೆ. ಆದರೆ ಬೆಳಗಾವಿ, ಹುಬ್ಬಳ್ಳಿ-ಧಾರವಾಡಗಳಲ್ಲಿ ೧೫ ಮೀಟರ್ ನಿಗದಿಯಾಗಿದೆ. ಕಟ್ಟಡದಲ್ಲಿ ಎಸ್‌ಟಿಪಿ ಪ್ಲಾಂಟ್ ಇರಬೇಕು ಎಂಬ ನಿಯಮ ರದ್ದುಪಡಿಸಬೇಕು. ಈ ಕುರಿತು ನಗರಾಭಿವೃದ್ಧಿ ಸಚಿವರ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿದೆ.
ಕಲಬುರಗಿಯಲ್ಲಿ ತಲೆ ಎತ್ತಿರುವ ಅನಧಿಕೃತ ಲೇಔಟ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದಕ್ಕೆ ಸ್ಪಂದಿಸಿದ ಸಚಿವರು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ. ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣಬಸಪ್ಪ ದರ್ಶನಾಪುರ, ಡಾ.ಶರಣಪ್ರಕಾಶ ಪಾಟೀಲ್, ಈಶ್ವರ ಖಂಡ್ರೆ ಇತರರಿಗೆ ಮನವಿಪತ್ರ ಸಲ್ಲಿಸಿತು. ಅಧ್ಯಕ್ಷ ಉದಯ ಶೆಟ್ಟಿ, ಮೆಂಟರ್ ರಫಿಯುದ್ದೀನ್, ಮಾಜಿ ಅಧ್ಯಕ್ಷ ಅಬ್ದುಲ್ ನಜೀಬ್, ಸಂಜೋಗ ರಾಠಿ, ಕಾರ್ಯದರ್ಶಿ ಶಫೀಕ್ ಅಹ್ಮದ್, ಚಂದ್ರಶೇಖರ ನಾಯ್ಡು ನಿಯೋಗದಲ್ಲಿದ್ದರು.