ಜಿಲ್ಲೆ

ಹೊಸ ಶಿಕ್ಷಣ ನೀತಿ ಸ್ಪರ್ಧಾತ್ಮಕ ಜಗತ್ತಿಗೆ ಪೂರಕ

ಶಹಾಪುರ : ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸ ರಾಷ್ಟಿçÃಯ ಶಿಕ್ಷಣ ನೀತಿ ಕೌಶಲಾಧಾರಿತ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತಿದೆ ಎಂದು ಪ್ರಾಚಾರ್ಯ ಎನ್.ಪಿ.ಬೆಟಗೇರಿ ತಿಳಿಸಿದರು.

ಹೋತಪೇಟ ಗ್ರಾಮದ ಜವಾಹರ ನವೋದಯ ವಿದ್ಯಾಲಯದಲ್ಲಿ ಶುಕ್ರವಾರ ಎನ್‌ಇಪಿಯ ಮೂರನೇ ವಾರ್ಷಿಕೋತ್ಸವ ನಿಮಿತ್ತ ಸುದ್ದಿಗೋಷ್ಠಿ ನಡೆಸಿದ ಅವರು, ಈ ಶಿP್ಷÀಣ ನೀತಿ ಬೋಧನೆ ಜತೆಗೆ ವಿದ್ಯಾರ್ಥಿಗಳ ಕೇಂದ್ರಿತ ಕಲಿಕೆಗೆ ಮಹತ್ವ ನೀಡಿದೆ. ರಾಷ್ಟಾçದ್ಯಂತ ೬ರಿಂದ ೧೨ನೇ ತರಗತಿಯ ಎಲ್ಲ ಸಿಬಿಎಸ್‌ಇ ಶಾಲೆಗಳಲ್ಲಿ ಹೊಸ ಶಿP್ಷÀಣ ನೀತಿ ಅಳವಡಿಸಿದ್ದು, ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಶಿP್ಷÀಣ ನೀಡುವುದರ ಜತೆಗೆ ಮಕ್ಕಳಲ್ಲಿ ಕಲಿಕಾ ಕೌಶಲ ಹೆಚ್ಚಿಸಲು ಅನುಕೂಲವಾಗಿದೆ ಎಂದರು.

ಶಿP್ಷÀಕ ಸಂಜೀವಕುಮಾರ ಮಾತನಾಡಿ, ವಿಶ್ವದೊಂದಿಗೆ ಸಮನ್ವಯ ಸಾಧಿಸುವ ಉz್ದೆÃಶದಿಂದ ಈ ಶಿP್ಷÀಣ ನೀತಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ವಿದ್ಯಾರ್ಥಿಗಳಿಗೆ ಗಣಿತ ಮತ್ತು ಕಂಪ್ಯೂಟರ್ ಜ್ಞಾನ ಒಳಗೊಂಡ ಚಟುವಟಿಕೆ ಮತ್ತು ವೃತ್ತಿಪರ ಕರಕುಶಲಗಳ ಆಧರಿತ ವಿಷಯಗಳನ್ನು ತಿಳಿಹೇಳುವ ಜತೆಗೆ ಶಿP್ಷÀಣದಲ್ಲಿ ಹೊಸ ಯುಗದ ಉಪಕರಣ ಮತ್ತು ತಂತ್ರಜ್ಞಾನಗಳ ಶಕ್ತಿಯನ್ನು ಬಳಸಿಕೊಳ್ಳಲು ಪೂರಕವಾಗಿದೆ ಎಂದು ಹೇಳಿದರು.

ಪ್ರಾಚಾರ್ಯ ದೇವಿಂದ್ರಪ್ಪ ಮಡಿವಾಳಕರ್, ನಿವೃತ್ತ ಪ್ರಾಚಾರ್ಯ ರಾಜಶೇಖರ ಗಣಾಚಾರಿ, ಸಿಆರ್‌ಪಿ ಮಶಾಕ್ ಇನಾಮದಾರ್, ಜಿಪಂ ಮಾಜಿ ಸದಸ್ಯ ಕಿಶನ್ ರಾಠೋಡ್, ಶಿP್ಷÀಕ ಕರೀಮ್ ಬಾಷಾ ಇದ್ದರು.