ಜಿಲ್ಲೆ

ಹೊಸ ರೈಲು ಮಾರ್ಗಕ್ಕೆ ಹಣ ಮಂಜೂರು

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ 52 ಕಿಮೀ ಉದ್ದದ ಸ್ವಾಮಿಹಳ್ಳಿ ರಾಯದುರ್ಗ ಹೊಸ ಮಾರ್ಗ ಮತ್ತು 65 ಕಿಮೀ ಉದ್ದದ ಹೊಸಪೇಟೆ-ಬಳ್ಳಾರಿ ಚತುಷ್ಪಥ ಮಾರ್ಗದ ಅಂತಿಮ ಸರ್ವೆ ಸಮೀಕ್ಷೆಗೆ ರೈಲ್ವೆ ಸಚಿವಾಲಯ ಒಪ್ಪಿಗೆ ಸೂಚಿಸಿದೆ.

ಹೊಸಪೇಟೆ-ಬಳ್ಳಾರಿ ಚತುಷ್ಪತ ಮಾರ್ಗಕ್ಕೆ 2.2 ಕೋಟಿ ರೂ. ಮತ್ತು ಸ್ವಾಮಿಹಳ್ಳಿ - ರಾಯದುರ್ಗ ಹೊಸ ಮಾರ್ಗಕ್ಕೆ 5.95 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.