ಹುಬ್ಬಳ್ಳಿಯಲ್ಲಿ ನೈಋತ್ಯ ರೇಲ್ವೆ ಮಹಾ ವ್ಯವಸ್ಥಾಪಕ ಮುಕುಲ್ ಶರಣ ಮಾಥೂರ ಅವರನ್ನು ರಾಜ್ಯ ರೇಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಕುತುಬುದ್ದೀನ ಖಾಜಿ ಅವರ ನೇತೃತ್ವದ ನಿಯೋಗವು ಭೇಟಿಯಾಗಿ ಮನವಿ ಸಲ್ಲಿಸಿತು. 
ಜಿಲ್ಲೆ

ಹೊಸ ರೈಲು ಮಾರ್ಗ, ಸಂಚಾರ ಆರಂಭಿಸಿ

ಬಾಗಲಕೋಟೆ: ನೈಋತ್ಯ ರೇಲ್ವೆ ಮಹಾ ವ್ಯವಸ್ಥಾಪಕ ಮುಕುಲ್ ಶರಣ ಮಾಥೂರ ಅವರನ್ನು ರಾಜ್ಯ ರೇಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಕುತುಬುದ್ದೀನ ಖಾಜಿ ಅವರ ನೇತೃತ್ವದ ನಿಯೋಗವು ಗುರುವಾರ ಹುಬ್ಬಳ್ಳಿಯಲ್ಲಿ ಭೇಟಿಯಾಗಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು.

ಕುಡಚಿ, ಬಾಗಲಕೋಟೆ ರೇಲ್ವೆ ಮಾರ್ಗದ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸುವದು, ಲೋಕಾಪುರ, ಧಾರವಾಡ ಹೊಸ ರೈಲು ಮಾರ್ಗ ಅನುಷ್ಠಾನಗೊಳಿಸುವದು, ಲೋಕಾಪೂರವರೆಗೆ ಪ್ಯಾಸೆಂಜರ್ ರೈಲು ಪ್ರಾರಂಭಿಸುವದು. ಗದಗ, ಬಾಗಲಕೋಟೆ, ಸೋಲಾಪುರ ಮಾರ್ಗದಲ್ಲಿ ಹೆಚ್ಚಿನ ರೇಲ್ವೆ ಸೌಲಭ್ಯ ದೊರಕಿಸುವ ಸೇರಿದಂತೆ ಅನೇಕ ಬೇಡಿಕೆಗಳನ್ನು ಮುಂದಿಟ್ಟರು.

ಈ ಸಂದರ್ಭದಲ್ಲಿ ಕುತುಬುದ್ದೀನ ಖಾಜಿ ಮಾತನಾಡಿ, ಕಳೆದ ಎರಡು ದಶಕಗಳಿಂದ ಕುಡಚಿ ರೈಲು ಮಾರ್ಗ ಕುಟುಂಬತ್ತ ಸಾಗಿದೆ. ೨೦೨೬ರ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು, ಲೋಕಾಪುರದವರೆಗೆ ಪ್ಯಾಸೆಂಜರ ರೈಲು ಪ್ರಾರಂಭಿಸಬೇಕು. ಸವದತ್ತಿ ಯಲ್ಲಮ್ಮನ ಭಕ್ತರಿಗೆ ಅನುಕೂಲವಾಗುವಂತೆ ಲೋಕಾಪುರ-ಸವದತ್ತಿ-ಧಾರವಾಡ ಈಗಾಗಲೇ ಸಮೀಕ್ಷೆ ಕಾರ್ಯ ಮುಗಿದಿದ್ದು, ಮುಂಬರುವ ಕೇಂದ್ರ ಮುಂಗಡ ಪತ್ರದಲ್ಲಿ ಅನುಷ್ಠಾನಗೊಳಿಸಬೇಕು. ಗದಗ-ಯಲವಿಗಿ ಹೊಸ ರೈಲು ಮಾರ್ಗ, ಆಲಮಟ್ಟಿ-ಯಾದಗಿರಿ ಹೊಸ ರೈಲು ಮಾರ್ಗಗಳು ಕಾರ್ಯರೂಪಕ್ಕೆ ತರಬೇಕು. ರೈಲು ಸಂಖ್ಯೆ ೧೭೩೦೭-೧೭೩೦೮ ಬಸವಾ ಎಕ್ಸಪ್ರೇಸ್ ಲೋಕಾಪುರ ವರೆಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ರೈಲು ಸಂಖ್ಯೆ ೨೦೬೫೭ ಹುಬ್ಬಳ್ಳಿ ನಿಜ್ಜಾಮುದ್ದೀನ ದಿನನಿತ್ಯ ಸಂಚರಿಸುವAತೆ ಮಾಡಬೇಕು. ರೈಲು ಸಂಖ್ಯೆ ೧೬೨೧೭ ಮೈಸೂರ-ಸಾಯಿನಗರ ರೈಲು ಸಂಖ್ಯೆ ೧೬೫೮೭ ಯಶವಂತಪುರ-ಬಿಕಾನೇರ ದಿನನಿತ್ಯ ಪ್ರಾರಂಬಿಸಬೇಕು. ರೈಲು ಸಂಖ್ಯೆ ೫೭೧೩೪ ರಾಯಚೂರ-ವಿಜಯಪುರ ಗದಗವರೆಗೂ ವಿಸ್ತರಿಸಬೇಕು. ರೈಲು ಸಂಖ್ಯೆ ೧೬೫೦೫-೧೬೫೦೬ ಬೆಂಗಳೂರಿನಿAದ ಗಾಂಽಧಾಮಕ್ಕೆ ಹೋಗುವ ರೈಲು ಭೂಚ್‌ದವರೆಗೆ ವಿಸ್ತರಿಸಬೇಕು. ಹೈದ್ರಾಬಾದ-ವಿಜಯಪು ರೈಲು ಗದಗ ವರೆಗೆ ವಿಸ್ತರಿಸಬೇಕು, ಗದಗ-ಹುಟಗಿ ಡಬಲಿಂಗ ವಿದ್ಯುತಕರಣ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಬೇಕು, ಒಂದೇ ಭಾರತ ರೈಲು ಆರಂಭಿಸಬೇಖು ಎಂದು ಆಗ್ರಹಿಸಿದರು.

ಬಾಗಲಕೋಟ ರೈಲು ನಿಲ್ದಾಣ ಅಮೃತ ಭಾರತ ಯೋಜನೆಯಡಿಯಲ್ಲಿ ನಿರ್ಮಾಣಗೊಂಡಿದ್ದು, ಅದಕ್ಕೆ ತಕ್ಕಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. -Àಂಡರಪುರ-ತಿರುಪತಿ ಹೊಸ ರೈಲು ಪ್ರಾರಂಭಿಸಿ ವಿಜಯಪುರ, ಬಾಗಲಕೋಟೆ, ಗದಗ ಮಾರ್ಗದಲ್ಲಿ ಸಂಚರಿಸುವAತೆ ಮಾಡಬೇಕು. ವಿಜಯಪುರದಿಂದ ಗುಂತಕಲ್ಲ ಹೊಸ ಪ್ಯಾಸೆಂಜರ ರೈಲು ಪ್ರಾರಂಭಿಸಬೇಕು ಎಂದು ಮನವಿ ಸಲ್ಲಿಸಿತು.

ಸಮಿತಿ ಧಾರವಾಡ ಜಿಲ್ಲಾ ಅಧ್ಯಕ್ಷ ಬಾಬಾಜಾನ ಮುಧೋಳ, ಮಂಜುಳಾ ಭೂಸಾರಿ, ಪ್ರೇಮಾ ರಾಠೋಡ, ಎಂ.ಕೆ. ಯಾದವಾಡ, ಜೆ.ಎಂ. ಜೈನಖಾನ, ರಾಜಕಿಶೋರ ನಿಡೋನಿ, ಬಸವರಾಜ ಕಪ್ಪಣ್ಣವರ, ಡಿ.ಎ-ï. ಹಾಜಿ, ದಾದಾಪೀರ ಕೆರೂರ, ಮೈನುದ್ದೀನ ಖಾಜಿ, ಮಮತಾಜ ಸುತಾರ ಇತರರು ಇದ್ದರು