ಚನ್ನಮ್ಮನ ಕಿತ್ತೂರು: ತಾಲೂಕಿನ ನಿಂಗಾಪುರ ಗ್ರಾಮದ ಕೆಲ ಕೃಷಿಕ ಕುಟುಂಬಗಳು ಜಮೀನಿನಿಂದ ಕೆರೆ ದಾಟಲು ಮಳೆಗಾಲದಲ್ಲಿ ತೀವ್ರ ಹರಸಾಹಸ ಪಡುತ್ತಿದ್ದರು. ಸೋಮವಾರ ಗಾಳಿಯಿಂದ ತುಂಬಿದ ಟೆಯರ್ ಹಾಗೂ ಟ್ಯೂಬ್ ಬಳಸಿ ಹಲಗೆ ಮೇಲೆ ಕುಳಿತು ಶಾಲಾ ಮಕ್ಕಳು ನದಿ ದಾಟಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಮಂಗಳವಾರ ಟನಾ ಸ್ಥಳಕ್ಕೆ ಶಾಸಕ ಬಾಬಾಸಾಹೇಬ ಪಾಟೀಲ ಅವರು ದೌಡಾಯಿಸಿದರು. ತಣ ಹೊಸ ಬೋಟ್ ವ್ಯವಸ್ಥೆ ಮಾಡಿದರು. ಮಳೆ ಕಡಿಮೆಯಾಗುತ್ತಿದ್ದಂತೆ ಕಿರುಸೇತುವೆ ನಿರ್ಮಾಣ ಮಾಡಿ ಗ್ರಾಮಸ್ಥರು ಶಾಲಾ ಮಕ್ಕಳಿಗೆ ಅನುಕೂಲ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕೆಲವರ ಜಮೀನಿಗೆ, ಶಾಲೆಗೆ ತೆರಳಲು ಕೆರೆ ದಾಟಿಯೇ ಹೋಗಬೇಕಿತ್ತು. ಹಲವು ವರ್ಷಗಳಿಂದ ಕಿರುಸೇತುವೆ ನಿರ್ಮಿಸಿಕೊಡುವಂತೆ ಹಲವು ಬಾರಿ ಅ-ಧಿಕಾರಿಗಳು, ಜನಪ್ರತಿನಿಧಿ-ಗಳಿಗೆ ಸ್ಥಳಿಯ ಕೃಷಿಕ ಕುಟುಂಬಗಳು ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಅನಿವಾರ್ಯವಾಗಿ ಟೈಯರ್ ಟ್ಯೂಬ್ ಬಳಸಿ ಹಲಗೆ ಮೇಲೆ ಕುಳಿತು ಶಾಲಾ ಮಕ್ಕಳು, ಜನರು ಪ್ರಯಾಸದಿಂದ ಕೆರೆ ದಾಟುತ್ತಿದ್ದರು. ತಹಸೀಲ್ದಾರ್ ರವೀಂದ್ರ ಹಾದಿಮನಿ, ಲೋಕೋಪಯೋಗಿ ಅಧಿಕಾರಿ ಸಂಜೀವ ಮಿರಜಕರ, ತಾಲೂಕು ಶಿಣಾಧಿಕಾರಿ ಚನ್ನಬಸಪ್ಪ ತುಬಾಕಿ, ಅಶ್ಪಾಕ್ ಹವಾಲ್ದಾರ್, ಬಿಷ್ಠಪ್ಪ ಶಿಂಧೆ, ಮಹಾಂತೇಶ ಎಮ್ಮೆ, ದಶರಥ ಮಡಿವಾಳರ, ಸತೀಶ ಸಾವನ್ನವರ ಇತರರಿದ್ದರು.