format: 0; filter: 0; fileterIntensity: 0.0; filterMask: 0; captureOrientation: 0; runfunc: 0; algolist: 0; multi-frame: 1; brp_mask:0; brp_del_th:0.0000,0.0000; brp_del_sen:0.0000,0.0000; motionR: 1; delta:1; bokeh:1; module: photo;hw-remosaic: false;touch: (-1.0, -1.0);sceneMode: 12582912;cct_value: 0;AI_Scene: (-1, -1);aec_lux: 148.0;aec_lux_index: 0;albedo: ;confidence: ;motionLevel: 1;weatherinfo: weather?null, icon:null, weatherInfo:100;temperature: 32; 
ಜಿಲ್ಲೆ

ಹೊಸ ಡಿಸಿ ಕಚೇರಿ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ: ನಗರದ ಹೊರವಲಯ ಕುಂಚಿಗನಾಳ್ ಕಣಿವೆ ಬಳಿ ನಿರ್ಮಿಸುತ್ತಿರುವ ಡಿಸಿ ಕಚೇರಿ ನೂತನ ಕಟ್ಟಡದ ಸ್ಥಳ, ವಿನ್ಯಾಸ ಹಾಗೂ ಎಸ್ಟಿಮೇಟ್ ಕುರಿತಂತೆ ಅತೃಪ್ತಿ ವ್ಯಕ್ತಪಡಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಇದಕ್ಕೆಲ್ಲ ಯಾರು ಕಾರಣ ಎಂಬುದರ ಕುರಿತು ವರದಿ ಸಲ್ಲಿಸಲು ಜಿಲ್ಲಾಧಿಕಾರಿಗೆ ಆದೇಶಿಸಿರುವುದಾಗಿ ಹೇಳಿದರು.

ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರೊಂದಿಗೆ ಡಿಸಿ ಕಚೇರಿ ಹೊಸ ಕಟ್ಟಡ ನಿರ್ಮಾಣದ ಪ್ರಗತಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಕಟ್ಟಡ ನಗರದಿಂದ ದೂರವಿದೆ. ಗುಡ್ಡ ಕೊರೆದು ಕಟ್ಟಡ ನಿರ್ಮಿಸಲಾಗಿದೆ. ಯೋಜನಾ ವೆಚ್ಚ ಸಿದ್ಧಪಡಿಸುವ ಸಂದರ್ಭದಲ್ಲಿ ಅಧಿಕಾರಿಗಳು ಕಾಮನ್‌ಸೆನ್ಸ್ ಇಲ್ಲದಂತೆ ವರ್ತಿಸಿದ್ದಾರೆ. ಎಸ್ಟಿಮೇಟ್ ಎಂದರೆ ಅದಕ್ಕೂಂದು ತೂಕ, ಗಂಭೀರತೆ ಇರಬೇಕು ಎಂದರು.

25 ಕೋಟಿ ರೂ.ವೆಚ್ಚದ ಮೊದಲ ಪ್ಲಾೃನಿಂಗ್‌ನಲ್ಲಿ 10 ಕೋಟಿ ರೂ.ಗುಡ್ಡ ಸಮತಟ್ಟು ಮಾಡಲು ವೆಚ್ಚವಾಗಿದೆ. ಈವರೆಗೂ 47 ಕೋಟಿ ರೂ. ಖರ್ಚಾಗಿದೆ. ಇನ್ನು 15 ಕೋಟಿ ರೂ.ಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಕುಡಿವ ನೀರಿಗೂ ತೊಂದರೆ ಇದೆ. ಡಿಸೈನ್ ಕೂಡ ಸರಿ ಇಲ್ಲ, ಕಾಮಗಾರಿ ಕೂಡ ಆಮೆಗತಿಯಲ್ಲಿದೆ ಎಂದರು.

ಆದರೂ, ಈ ಕಟ್ಟಡವನ್ನು ಇನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಒದಗಿಸಲಾಗುವುದು. ಕಟ್ಟಡದ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಬೇಕು. ಇಲ್ಲಿ ವಿವಿಧ ಇಲಾಖೆಗಳಿಗೆ, ಸಾರ್ವಜನಿಕರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸುವ ರೀತಿಯಲ್ಲಿ ಯೋಜಿಸಿ ಮುಂದಿನ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ ಎಂದರು.

ಗುಡ್ಡ ಕಡಿದು ಮಣ್ಣು ಅಕ್ರಮ ಸಾಗಾಣಿಕೆ ಕುರಿತ ತನಿಖಾ ವರದಿಯನ್ನೂ ತರಿಸಿಕೊಂಡು ಪರಿಶೀಲಿಸುವುದಾಗಿ ಹೇಳಿದರು.

ಡಿಸಿ ಟಿ. ವೆಂಕಟೇಶ್, ಎಡಿಸಿ ಬಿ.ಟಿ. ಕುಮಾರಸ್ವಾಮಿ ಇತರರು ಇದ್ದರು.