ಚಿಕ್ಕಮಗಳೂರು: ಅಂಗನವಾಡಿ ಕೇಂದ್ರದ ಹೊಸ ಕಟ್ಟಡ ನಿರ್ಮಾಣಕ್ಕೆ ಮೀಸಲಿಟ್ಟಿ ರುವ ಅನುದಾನವನ್ನು ಬೇರೆಡೆ ವರ್ಗಾಯಿಸಬಾರದು ಎಂದು ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಮತ್ತು ಗ್ರಾಮಸ್ಥರು ಕೆಳಗೂರು ಗ್ರಾಮ ಪಂಚಾಯಿತಿಗೆ ಸೋಮವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷೆ ದೇವಕಿ, ಆಲ್ದೂರು ಹೋಬಳಿಯ ಹಾಂದಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡ ನಿರ್ಮಿಸಲು ಸರ್ಕಾರದಿಂದ ೨೦೨೩-೨೪ನೇ ಸಾಲಿನಲ್ಲಿ ೨೦ ಲಕ್ಷ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಹೊಸ ಕಟ್ಟಡ ನಿರ್ಮಾಣದ ಸಂಬAಧ ಹಲವು ಅಡೆ-ತಡೆಗಳಿರುವ ಕಾರಣ ಇದುವರೆಗೂ ಖಾತೆಗೆ ಅನುದಾನ ಜಮೆಯಾಗಿಲ್ಲ. ಈ ಹಿಂದೆ ಪಂಚಾಯಿತಿ ಕಟ್ಟೆ ಸಭೆಯಲ್ಲಿ ಗ್ರಾಮಸ್ಥರು, ಸಮಿತಿ ಪದಾಧಿಕಾರಿಗಳು ಕಟ್ಟಡ ನಿರ್ಮಾಣಕ್ಕೆ ಶೀಘ್ರವೇ ಕಾರ್ಯಗತಗೊಳಿಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು ಎಂದರು.
ಪ್ರಸ್ತುತ ಅಂಗನವಾಡಿ ಕೇಂದ್ರದಲ್ಲಿ ಪರಿಶಿಷ್ಟರ ೩ ರಿಂದ ೬ ವರ್ಷದ ೨೫ ಮಕ್ಕಳು, ೬ ತಿಂಗಳಿನಿAದ ೩ ವರ್ಷದ ೧೫ ಮಕ್ಕಳ ಸಂಖ್ಯೆಯಿದೆ. ಗರ್ಭಿಣಿ ಮತ್ತು ಬಾಣಂತಿಯರು ೧೫ಕ್ಕೂ ಹೆಚ್ಚು ಫಲಾನುಭವಿಗಳಿದ್ದಾರೆ. ಈ ಕೇಂದ್ರವು ೩೦ ವರ್ಷಗಳ ಹಳೇ ಕಟ್ಟಡವಾಗಿದ್ದು ವಿಪರೀತ ಮಳೆಯಿಂದ ಸಂಪೂರ್ಣ ಶಿಥಿಲಗೊಂಡಿದೆ ಎಂದರು.
ಹೊಸದಾಗಿ ಅಂಗನವಾಡಿ ಕೇಂದ್ರದ ನಿರ್ಮಿಸಲು ಶೀಘ್ರವೇ ಸರ್ಕಾರದ ವತಿಯಿಂದ ದಾಖಲಾತಿಗಳನ್ನು ಒದಗಿಸುವುದರ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಡಿಎಸ್‌ಎಸ್ ಮುಖಂಡ ಸೋಮಣ್ಣ ಮಾತನಾಡಿ, ಈ ಹಿಂದೆ ಹಾಂದಿಯ ಪಂಚಾಯಿತಿ ಕಟ್ಟೆ ಸಭೆಯಲ್ಲಿ ಗ್ರಾಮಸ್ಥರು ಮನವಿ ಸಲ್ಲಿಸಿ ೧೫ ದಿನಗಳ ಗಡುವು ನೀಡಿದ್ದೆವು. ಹೊಸ ಕಟ್ಟಡಕ್ಕೆ ಶೀಘ್ರವೇ ಅನುಮತಿ ನೀಡಿ ಕಾಮಗಾರಿ ಪ್ರಾರಂಭಿಸಲು ಸೂಚಿಸದಿದ್ದಲ್ಲಿ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಲತಾ, ಲಕ್ಷö್ಮಣ್, ವಿನುತ, ಅಂಗನವಾಡಿ ಶಿಕ್ಷಕಿ ಮೈನಾ, ಗ್ರಾಮಸ್ಥರಾದ ದೇವರಾಜ್, ದಿನೇಶ್, ರಾಧಾ, ಮಂಜುನಾಥ್, ಶರವಣ, ಲಕ್ಷಿö್ಮÃ, ಜಾನಕಿ, ವನಜಾಕ್ಷಿ, ಕುಮಾರ್, ಈರಯ್ಯ, ನಿಶಾಂತ, ಪುಟ್ಟಸ್ವಾಮಿ, ಸಿಂಚನ, ಸರೋಜ, ಗೀತಾ, ಮಲ್ಲೇಶ್, ಸಾರ್, ಕಿರಣ್ ಕೃಷ್ಣ, ಶಿವು, ವಸಂತ್ ಮತ್ತಿತರರಿದ್ದರು.