ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಹೊಳೆಹೊನ್ನೂರಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳೊಂದಿಗೆ ಈರಪ್ಪ, ರಿಹಾನಾ ಸುಲ್ತಾನ್, ಇಮ್ರಾನ್ ಇತರರಿದ್ದರು. 
ಜಿಲ್ಲೆ

ಹೊಳೆಹೊನ್ನೂರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಹೊಳೆಹೊನ್ನೂರು: ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಹೊಳೆಹೊನ್ನೂರಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 14 ವರ್ಷದೊಳಗಿನ ಬಾಲಕಿಯರ 30 ಕೆ.ಜಿ. ವಿಭಾಗದಲ್ಲಿ ಜುನೇರಾ ಪ್ರಥಮ, 35 ಕೆ.ಜಿ. ವಿಭಾಗದಲ್ಲಿ ಶಿಾ ದ್ವಿತೀಯ, 26 ಕೆ.ಜಿ. ವಿಭಾಗದಲ್ಲಿ ಮದಿಹಾ ತಸ್ಕಿನ್ ತೃತೀಯ, 17 ವರ್ಷದೊಳಗಿನ ಬಾಲಕಿಯರ 32 ಕೆ.ಜಿ. ವಿಭಾಗದಲ್ಲಿ ಇಕ್ರ ಅಂಜುಂ ದ್ವಿತೀಯ, 50 ಕೆ.ಜಿ. ವಿಭಾಗದಲ್ಲಿ ಸುಹಾನಾ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರೌಢಶಾಲೆ ಮುಖ್ಯಶಿಕ್ಷಕ ಈರಪ್ಪ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ರಿಹಾನಾ ಸುಲ್ತಾನ್, ಎಸ್‌ಡಿಎಂಸಿ ಅಧ್ಯಕ್ಷ ಇಮ್ರಾನ್, ಅಮ್ಜದ್ ಖಾನ್, ದೈಹಿಕ ಶಿಕ್ಷಣ ಶಿಕ್ಷಕ ಕೆ.ಆರ್.ಶಿವರಾಜ್, ಇಂದಿರಾ, ಖಾಲಿ ಪತ್ತಾರ್ ರೆಹಮಾನ್ ಇದ್ದರು.