ಹೊಳೆನರಸೀಪುರ: ಪಟ್ಟಣದಲ್ಲಿ ಸಿಐಟಿಯು ಸಂಘಟನೆ ತಾಲೂಕು ಘಟಕ ಸದಸ್ಯರು ದೇಶವ್ಯಾಪ್ತಿ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ವಿವಿಧ ಬೇಡಿಕೆಗಳನ್ನು ಜಾರಿಗೊಳಿಸಲು ಒತ್ತಾಯಿಸಿ ಮತ್ತು ಕೇಂದ್ರ ಸರ್ಕಾರದ ಕೆಲವು ನಿಲುವುಗಳನ್ನು ವಿರೋಧಿಸಿ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯ ಮುಂಭಾಗದಿಂದ ಮೆರವಣಿಗೆ ಪ್ರಾರಂಭಿಸಿದರು.
ವಲ್ಲಭಭಾಯಿ ರಸ್ತೆ ಮುಖಾಂತರ ಹೊರಟ ಮೆರವಣಿಗೆಯು ಡಾ. ಅಂಬೇಡ್ಕರ್ ವೃತ್ತದ ಮೂಲಕ ತೆರಳಿ ಮಹಾತ್ಮ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು.
ನಂತರ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನಾ ಘೋಷಣೆಗಳನ್ನು ಕೂಗಿ, ತೆರಳಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಸಂಘಟನೆ ತಾಲೂಕು ಘಟಕದ ಗೌರವಾಧ್ಯಕ್ಷೆ ಲತಾ, ಅಧ್ಯಕ್ಷ ಮಲ್ಲಿಕಾರ್ಜುನ್, ಅಂಗನವಾಡಿ ಕಾರ್ಯಕರ್ತರ ಗೌರವಾಧ್ಯಕ್ಷೆ ಗೀತಾ, ಅಧ್ಯಕ್ಷೆ ವೀಣಾ, ಶೈಲಜಾ, ವಿಜಯ ಕುಮಾರಿ, ಕೃಷ್ಣಮೂರ್ತಿ, ಸಿಗರನಹಳ್ಳಿ ರಾಜು ಹಾಗೂ ಇತರರು ಭಾಗವಹಿಸಿದ್ದರು.