ಹೊಳೆನರಸೀಪುರ: ಪಟ್ಟಣದ ನೇಕಾರ ದೇವಾಂಗ, ಕುರುವಿನಶೆಟ್ಟಿ ಹಾಗೂ ಮಡಿವಾಳ ಜನಾಂಗದ ವತಿಯಿಂದ ಒಂದು ತಿಂಗಳ ಕಾಲ ಆಯೋಜಿಸಿದ್ದ ಧನುರ್ಮಾಸದ ಭಜನಾ ಕಾರ್ಯಕ್ರಮ ಸಂಕ್ರಾಂತಿ ಹಬ್ಬದ ದಿನವಾದ ಬುಧವಾರ ಮುಕ್ತಾಯವಾಯಿತು.
ಧನುರ್ಮಾಸ ತಿಂಗಳಲ್ಲಿ ದೇವಾಂಗ ರಾಮಮಂದಿರದಿಂದ ಪ್ರಾರಂಭವಾಗುತ್ತಿದ್ದ ಭಜನಾ ಕಾರ್ಯಕ್ರಮದ ಮೆರವಣಿಗೆಯು ಸುಭಾಷ್ ವೃತ್ತದವರೆಗೆ ತೆರಳಿ ಕನ್ನಿಕಾಪರಮೇಶ್ವರಿ, ಬಸವೇಶ್ವರ, ಚಾವಡಿ ಗಣಪತಿ, ಚೌಡೇಶ್ವರಿ, ಬನಶಂಕರಿ ದೇವಾಲಯದಲ್ಲಿ ಭಜನೆ ಮಾಡಿದ ನಂತರ ರಾಮಮಂದಿರದಲ್ಲಿ ಮಹಾಮಂಗಳಾರತಿ ನಂತರ ಭಜನೆ ಉತ್ಸವವು ಪೂರ್ಣಗೊಳ್ಳುತ್ತಿತ್ತು.
ಸಂಕ್ರಾಂತಿಯ ಹಬ್ಬದ ದಿನದಂದು ಲಕ್ಷ್ಮಣೇಶ್ವರ, ವೀರಾಂಜನೇಯ, ಗಾಂಧಿ ವೃತ್ತ, ರಾಘವೇಂದ್ರ ಮಠ, ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ, ಶನೇಶ್ವರ, ಕೋಟೆ ಮಾರಮ್ಮ ಹಾಗೂ ಇತರೆ ದೇವಾಲಯಗಳಿಗೆ ತೆರಳಿ ಭಜನಾ ಕಾರ್ಯಕ್ರಮ ನಡೆಸಿದರು.
ಭಜನಾ ಕಾರ್ಯಕ್ರಮದಲ್ಲಿ ಹಿರಿಯರಾದ ಎಚ್.ಎನ್. ವೆಂಕಟರಮಣಯ್ಯ, ಬಿ.ಲೀಲಾಧರ, ಎ.ಸೋಮಶೇಖರ್, ಕುಮಾರ್, ದಾಸಪ್ಪ, ಎಚ್.ವಿ.ಸುರೇಶ್ ಕುಮಾರ್, ಎ.ಜಗನ್ನಾಥ್, ವಸಂತ, ಎಚ್. ಎನ್.ಗಣೇಶ್, ಪ್ರವೀಣ್, ನಾರಾಯಣ, ಎಚ್.ಆರ್.ರವಿ, ಕಾಳಚಾರ್, ಈಶ್ವರ್, ತಮಣ್ಣಶೆಟ್ಟಿ, ಮಂಜು, ರಾಘು ಹಾಗೂ ಇತರರು ಭಾಗವಹಿಸಿದ್ದರು.