ಜಿಲ್ಲೆ

ಹೊಳಗುಂದಿ ಬಸ್ ನಿಲ್ದಾಣ ನಿರುಪಯುಕ್ತ

ಹೂವಿನಹಡಗಲಿ: ಹೊಳಗುಂದಿ ಗ್ರಾಮದಲ್ಲಿ ಲಕ್ಷಾಂತರ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಬಸ್‌ನಿಲ್ದಾಣ ಉದ್ದೇಶಿತ ಬಳಕೆಗಿಲ್ಲದೆ ನಿರಾಶ್ರಿತರ ತಾಣವಾಗಿ ಮಾರ್ಪಟ್ಟಿದೆ.

ಗ್ರಾಮದ ಇಟ್ಟಿಗಿ ಮಾರ್ಗದಲ್ಲಿ ಒಂಬತ್ತು ವರ್ಷಗಳ ಹಿಂದೆ ಲಕ್ಷಾಂತರ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಆದರೂ, ಎರಡು ಕಡೆ ಬಸ್‌ಗಾಗಿ ಜನರು ಕಾಯುತ್ತಾ ನಿಲ್ಲುತ್ತಾರೆ. ಹಳೆಯ ಬಸ್ ನಿಲ್ದಾಣ ಮತ್ತು ತೇರು ಬೀದಿಯ ಬಳಿ ಬಸ್‌ಗಳಿಗಾಗಿ ಜನರು ಕಾಯುತ್ತಾ ನಿಲ್ಲುತ್ತಾರೆ. ಇದರಿಂದಾಗಿ ಬಸ್‌ಗಳು ಬಸ್ ನಿಲ್ದಾಣಕ್ಕೆ ಬರುವುದಿಲ್ಲ. ಬಸ್ ನಿಲ್ದಾಣದಲ್ಲಿ ವಿದ್ಯುತ್ ದೀಪ, ಬೆಂಚ್, ಕಿಟಕಿ, ಕೊಠಡಿ ಬಾಗಿಲು ಹಾಗೂ ನೆಲಹಾಸನ್ನು ಕಳ್ಳತನ ಮಾಡಲಾಗಿದೆ.

ಹಳೇ ಬಸ್ ನಿಲ್ದಾಣ ನೆಲಸಮ ಮಾಡಿ ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಅಧಿಕಾರಿಗಳು ಬಸ್‌ಗಳು ಬಂದು ಹೋಗಲು ಹಾಗೂ ಇತರ ಸೌಲಭ್ಯ ಒದಗಿಸಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಇಟ್ಟಿಗಿ ಮಾರ್ಗದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದಾರೆ.