ಜಿಲ್ಲೆ

ಹೊಲದಲ್ಲಿ ಹಾವು ಕಡಿದು ರೈತ ಮಹಿಳೆ ಸಾವು

ಚಿಂಚೋಳಿ: ತಾಲೂಕಿನ ಸೋಮಲಿಂಗದಳ್ಳಿ ಗ್ರಾಮದ ರೈತ ಮಹಿಳೆ ಹೊಲದಲ್ಲಿ ಕೂಲಿ ಕೆಲಸ ಮಾಡುವ ವೇಳೆ ಹಾವು ಕಡಿದು ಸಾವನಪ್ಪಿರುವ ಘಟನೆ ಜರುಗಿದೆ. ಮೃತ ಮಹಿಳೆ ನಾಗಮ್ಮ ಗಂಡ ಬಾಲಪ್ಪ ಜನ್ಮುಲ್ ( 49) ಎನ್ನುವವರು ಶುಕ್ರವಾರದಂದು ತೊಗರಿ ಹೊಲದಲ್ಲಿ ಹುಲ್ಲಿನ ಕೀಳು ಕಿತ್ತುವಾಗ  ಹಾವು ಕಡಿತಕ್ಕೆ ಒಳಗಾಗಿದ್ದಾಳೆ. ಚಿಂಚೋಳಿ ಸರಕಾರಿ ಸಾರ್ವಜನಿಕ ಆಸ್ಪತ್ರೆ ತರುವ ಮಾರ್ಗ ಮಧ್ಯದಲ್ಲಿ ಸಾವನಪ್ಪಿದ್ದಾರೆ. ಮೃತ ಮಹಿಳೆಗೆ ಪುತ್ರ ಹಾಗೂ ಪುತ್ರಿ ಇದ್ದಾರೆ. ಮಿರಿಯಾಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.