ಚಿಕ್ಕಮಗಳೂರು: ಹಿಂಗಾರು ಮಳೆ ಧಾರಕಾರವಾಗಿ ಸುರಿದಿದ್ದರಿಂದಾಗಿ ತಾಲೂಕಿನ ಮಲ್ಲಂದೂರು ಸಮೀಪದ ಮೇಲುಹೊಲದಗದ್ದೆ ಸಮೀಪ ದೊಡ್ಡ ಮಟ್ಟದಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಸುಮಾರು ೨೦೦ ಅಡಿಗಳಷ್ಟು ಕೆಳಗಿನವರೆಗೆ ಮಣ್ಣು ಕುಸಿದಿದ್ದರಿಂದಾಗಿ ಹೊಲದಗದ್ದೆ ಭಾಗದ ಜನ ಆತಂಕಕ್ಕೆ ಒಳಗಾಗಿದ್ದಾರೆ.
ಕಡಿದಾದ ಪ್ರದೇಶದಲ್ಲಿಯೇ ದೊಡ್ಡ ಮಟ್ಟದಲ್ಲಿ ಭೂ ಕುಸಿತ ಸಂಭವಿಸಿದ್ದರಿAದಾಗಿ ರಸ್ತೆ ಕುಸಿಯದಂತೆ ಕಳೆದ ಐದು ವರ್ಷದ ಹಿಂದೆ ೧೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ತಡೆಗೋಡೆ ಸೇರಿದಂತೆ ಶೇ. ೨೫ರಷ್ಟು ರಸ್ತೆ ಭಾಗವೂ ೨೦೦ ಅಡಿ ಆಳದವರೆಗೆ ಕುಸಿತಗೊಂಡಿದೆ. ಇದರಿಂದಾಗಿ ಹೊಲದಗದ್ದೆ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕುಸಿತವಾಗುವ ಆಂತಕ ಎದುರಾಗಿದೆ.
ಒಂದು ವೇಳೆ ಇದೇ ಜಾಗದಲ್ಲಿ ಮತ್ತೊಮ್ಮೆ ಭೂ ಕುಸಿತ ಸಂಭವಿಸಿz್ದೆÃ ಆದಲ್ಲಿ ಹೊಲದಗದ್ದೆ, ಕವಿಕಲ್‌ಮಠ, ಕೆಳ ಹೊಲದಗದ್ದೆ, ಬಾಳೆಹಿತ್ಲು, ತೋಟದಮಕ್ಕಿ ಕಾಲನಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಕುಸಿತವಾಗಲಿದೆ. ಆಗ ಈ ಗ್ರಾಮಗಳು ಸಂಪೂರ್ಣವಾಗಿ ಹೊರಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಳ್ಳಲಿವೆ. ಅಲ್ಲದೆ ಮಲ್ಲಂದೂರಿನಿAದ ಮುತ್ತೋಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯದಲ್ಲಿ ಮರಗಳು ಬಿದ್ದಾಗ ಅಥವಾ ಯಾವುದೇ ಕಾರಣದಿಂದಲಾದರೂ ಸಂಪರ್ಕ ಕಡಿತಗೊಂಡಲ್ಲಿ ಮಲ್ಲಂದೂರಿನಿAದ ಮುತ್ತೋಡಿಗೆ ಸಂಪರ್ಕ ಕಲ್ಪಿಸಲು ಹೊಲದಗದ್ದೆ ರಸ್ತೆಯನ್ನೇ ಬಳಸಲಾಗುತ್ತದೆ.
ಒಂದು ವೇಳೆ ಮಲ್ಲಂದೂರು-ಮುತ್ತೋಡಿ ರಸ್ತೆಯಲ್ಲಿ ಸಂಪರ್ಕ ಕಡಿತಗೊಂಡು, ಹೊಲದಗದ್ದೆ ಬಳಿಯೂ ರಸ್ತೆ ಸಂಪೂರ್ಣವಾಗಿ ಕುಸಿದಿz್ದÉÃ ಆದಲ್ಲಿ ಹೊಲದಗದ್ದೆ ಭಾಗದ ಗ್ರಾಮಗಳು ಮಾತ್ರವಲ್ಲದೆ ಮುತ್ತೋಡಿ ಭಾಗದ ಹತ್ತಾರು ಗ್ರಾಮಗಳು ಸಂಪರ್ಕ ವಂಚಿತವಾಗಲಿವೆ.
ಇನ್ನು ಭೂ ಕುಸಿತವಾಗಿರುವ ಭಾಗದಲ್ಲಿಯೇ ವಿದ್ಯುತ್ ಲೈನ್ ಹಾದುಹೋಗಿದ್ದು, ನಾಲ್ಕು ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ ಹೊಲದಗದ್ದೆ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಶುಕ್ರವಾರ ಸಂಜೆವೇಳೆಗೆ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಲೈನ್ ಸರಿಪಡಿಸಿ ವಿದ್ಯುತ್ ವ್ಯವಸ್ಥೆ ಮಾಡಿದ್ದಾರೆ.
ಹೊಲದಗದ್ದೆ ಭಾಗದಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಗುಡ್ಡ ಕುಸಿತ ಸಂಭವಿಸುವ ಸಾಧ್ಯತೆಯಿದೆ. ಈಗಾಗಲೇ ಶೇ. ೨೫ರಷ್ಟು ರಸ್ತೆ ಗುಡ್ಡ ಕುಸಿತದಿಂದ ಕುಸಿದು ಹೋಗಿದೆ. ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುಡ್ಡ ಕುಸಿತವಾಗಿರುವ ತಳಭಾಗದಿಂದಲೂ ತಡೆಗೋಡೆ ನಿರ್ಮಾಣ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿತವಾಗುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಹೊಲದಗದ್ದೆ ನಿವಾಸಿ ಗಿರೀಶ್ ಒತ್ತಾಯಿಸಿದ್ದಾರೆ.