ಜಿಲ್ಲೆ

ಹೊರರಾಜ್ಯದಲ್ಲೂ ಕಿಂಗ್ ಐಸ್‌ಕ್ರೀಮ್ ಪ್ರಸಿದ್ಧ

ಬೆಳಗಾವಿ: ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಮನೆಮಾತಾಗಿರುವ ವಿಜಯಕಾಂತ ಡೇರಿ ಆ್ಯಂಡ್ ಪ್ರೊಡಕ್ಟ್ಸ್ ಕಂಪನಿಯ ‘ಕಿಂಗ್ ಐಸ್‌ಕ್ರೀಮ್’ ಕಡಿಮೆ ಸಮಯದಲ್ಲೇ ರಾಜ್ಯ, ಅಂತಾರಾಜ್ಯದಲ್ಲಿ ಹೆಚ್ಚು ಖ್ಯಾತಿ ಗಳಿಸಿದೆ.

2024ರ ಆಗಸ್ಟ್ 3ರಂದು ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ‘ಕಿಂಗ್ ಐಸ್‌ಕ್ರೀಮ್’ ಬಹುಬೇಗ ತನ್ನ ಬೇಡಿಕೆ ಹೆಚ್ಚಿಸಿಕೊಂಡಿದೆ. ರುಚಿ ಹಾಗೂ ಗುಣಮಟ್ಟದ ಮೂಲಕ ‘ಕಿಂಗ್ ಐಸ್‌ಕ್ರೀಮ್’ ಜನರಿಗೆ ಇಷ್ಟವಾಗಿದೆ. ಹುಬ್ಬಳ್ಳಿ-ಧಾರವಾಡ, ಗದಗ, ದಾವಣಗೆರೆ, ಕಲಬುರಗಿ, ಚಿತ್ರದುರ್ಗ, ಬಾಗಲಕೋಟೆ, ವಿಜಯಪುರ, ಉಡುಪಿ, ಕಾರವಾರ, ಅಂಕೋಲಾ, ಭಟ್ಕಳ, ಕುಂದಾಪುರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ರಾಯಚೂರು, ಸಿಂದದುರ್ಗ, ಬಳ್ಳಾರಿ, ಹೊಸಪೇಟೆ, ಗಂಗಾವತಿ, ಶಿವಮೊಗ್ಗ, ಕೊಪ್ಪಳ, ಮಹಾರಾಷ್ಟ್ರದ ಮುಂಬಯಿ, ಮಿರಜ್, ಕೊಲ್ಹಾಪುರ, ಸಾಂಗ್ಲಿ, ಗಡಿಂಗ್ಲಜ್, ಗೋವಾ ರಾಜ್ಯದಲ್ಲಿ ಅತೀ ಹೆಚ್ಚು ಮಾರಾಟವಾಗುತ್ತಿದೆ.

ಶುದ್ಧತೆಯೇ ಜೀವಾಳ: ಶುದ್ಧತೆಯನ್ನೇ ಜೀವಾಳ ಮಾಡಿಕೊಂಡಿರುವ ‘ಕಿಂಗ್ ಐಸ್‌ಕ್ರೀಮ್’ ರುಚಿ ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜೀ ಇಲ್ಲ. 70ಕ್ಕೂ ಅಧಿಕ ಐಸ್‌ಕ್ರೀಮ್ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ವಿಶಿಷ್ಟ ರುಚಿ ಮೂಲಕ ಗ್ರಾಹಕರನ್ನು ಹಿಡಿದಿಟ್ಟುಕೊಂಡಿದೆ. ಸ್ವಾದಿಷ್ಟ, ಸುವಾಸನೆ, ನಯವಾದ ಕೆನೆಭರಿತ ಪ್ರೀಮಿಯಂ ಪದಾರ್ಥಗಳನ್ನು ಹೊಂದಿರುವ ಕಿಂಗ್ ಐಸ್‌ಕ್ರೀಮ್‌ನ ಪ್ರತಿ ಸ್ಕೂಪ್‌ನಲ್ಲೂ ಅಸಾಧಾರಣ ರುಚಿಯ ಅನುಭವ ನೀಡುವಂತೆ ಕಾಳಜಿಯಿಂದ ಸಿದ್ಧಪಡಿಸಲಾಗಿದೆ. ವಿಜಯಕಾಂತ ಡೇರಿ ಆ್ಯಂಡ್ ುಡ್ ಪ್ರೊಡಕ್ಸ್ಟ್ ಕಂಪನಿ ಸ್ವತಃ ಹಾಲು ಸಂಗ್ರಹಣೆ ಮತ್ತು ಸಂಸ್ಕರಣಾ ಘಟಕ ಹೊಂದಿರುವುದರಿಂದ ಐಸ್‌ಕ್ರೀಮ್ ತಯಾರಿಕೆಯಲ್ಲಿ ಪ್ರೀಮಿಯಂ ಕ್ವಾಲಿಟಿ ಹಾಲು ಮತ್ತು ಕ್ರೀಮ್ ಬಳಕೆ ಮಾಡುತ್ತಿರುವುದು ವಿಶೇಷ.

ವಿಜಯಕಾಂತ ಡೇರಿಯ ಪ್ರತಿಯೊಂದು ಉತ್ಪನ್ನವೂ ಮಹತ್ವ ಪಡೆದುಕೊಂಡಿದೆ. ಇದೀಗ ಹೊಸದಾಗಿ ಪರಿಚಯಿಸಿದ ‘ಕಿಂಗ್’ ಐಸ್‌ಕ್ರೀಮ್ ಉತ್ಪನ್ನವೂ ಹೊಸ ಸಂಚಲನ ಸೃಷ್ಟಿಸಿದೆ. ಕಿಂಗ್ ಐಸ್‌ಕ್ರೀಮ್ ರುಚಿ ಸವಿ ಸವಿಯಲು ಗ್ರಾಹಕರು ತುದಿಗಾಲಲ್ಲಿ ನಿಲ್ಲುತ್ತಿದ್ದಾರೆ. ಅಲ್ಲದೆ, ಜನರೇ ಕಿಂಗ್ ಐಸ್‌ಕ್ರೀಮ್ ಉತ್ಪನ್ನ ಕುರಿತು ಪರಿಚಯಿಸುತ್ತಿರುವುದು ವಿಶೇಷ. ರಾಷ್ಟ್ರ, ಅಂತಾರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಐಸ್‌ಕ್ರೀಮ್ ಮಾರುಕಟ್ಟೆಯಲ್ಲಿ ‘ಕಿಂಗ್’ ಐಸ್‌ಕ್ರೀಮ್ ಹೊಸ ಮೈಲಿಗಲ್ಲು ಸ್ಥಾಪಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ಮಾರಾಟಗಾರರು, ವಿತರಕರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.