ಸೋಮವಾರಪೇಟೆ: ಪಟ್ಟಣದಲ್ಲಿ ಗುರುವಾರ ಹೊರ ರಾಜ್ಯದ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಪೊಲೀಸರು ಮೊಬೈಲ್ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.
ಹಲವು ಸಮಯಗಳಿಂದ ಪಟ್ಟಣದಲ್ಲಿ ಹೊರರಾಜ್ಯದ ಲಾಟರಿ ಮಾರಾಟ ದಂಧೆ ನಿರಾಂತಕವಾಗಿ ನಡೆಯುತ್ತಿದ್ದು, ಇದರ ಮಾಹಿತಿ ತಿಳಿದ ವೃತ್ತ ನಿರೀಕ್ಷಕ ಮುದ್ದು ಮಾದೇವ ಮತ್ತು ಸಿಬ್ಬಂದಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಕ್ಯಾಂಟೀನ್, ಕ್ಲಬ್ ರಸ್ತೆಯ ಅಂಗಡಿ ಹಾಗೂ ಮಡಿಕೇರಿ ರಸ್ತೆಯಲ್ಲಿ ಮೊಬೈಲ್ ಮೂಲಕ ಲಾಟರಿ ಮಾರಾಟ ಮಾಡುತ್ತಿದ್ದ ಶಿವಕುಮಾರ್, ಸುಜಿತ್ ಮತ್ತು ಶ್ರೀಕರ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತರಿಂದ 17,200 ರೂ. ನಗದು ಹಾಗೂ ಮಾರಾಟಕ್ಕೆ ಬಳಸುತ್ತಿದ್ದ ಮೊಬೈಲ್ ವಶಪಡಿಸಿಕೊಂಡು ದೂರು ದಾಖಲಿಸಿದ್ದಾರೆ.