ಚಿತ್ರದುರ್ಗ:ಜಿಲ್ಲೆಯ ಆರು ತಾಲೂಕುಗಳನ್ನೂ ತೀವ್ರ ಬರ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದ್ದು,ಬರದ ತೀವ್ರತೆ ಜಿಲ್ಲೆಯಲ್ಲಿ ಅಧಿಕ ವಾಗಿದೆ. ಇದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಬಹುದು. ಪರಿಸ್ಥಿತಿ ನಿಬಾಯಿಸಲು ಜಿಲ್ಲಾ ವ್ಯಾಪ್ತಿಯಲ್ಲಿ ಉತ್ಪಾದನೆಯಾ ಗುವ ಎಲ್ಲ ವಿಧದ ಹಸಿರು,ಒಣ ಹಾಗೂ ಸಂಸ್ಕರಿಸಿದ ಮೇವನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಹೊರತುಪಡಿಸಿ ಹೊರ,ರಾಜ್ಯ,ಜಿಲ್ಲೆಗಳಿಗೆ ಸಾಗಾಣಿಕೆ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶಿಸಿದ್ದಾರೆ.
ರಾಜ್ಯಸರ್ಕಾರ ಈಗಾಗಲೇ ಹೊರರಾಜ್ಯಗಳಿಗೆ ಮೇವು ಸಾಗಾಣಿಕೆ ಮಾಡದಂತೆ ನಿಷೇಧಿಸಿ 2023 ನವೆಂಬರ್‌ನಲ್ಲಿ ಆದೇಶಿಸಿದೆ. ಈ ಆದೇಶ ಗಳನ್ನು ಉಲ್ಲಂಘಿಸಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಯಾವುದೇ ರೂಪದಲ್ಲಿ ಮೇವು ಸಾಗಾಣಿಕೆ ಮಾಡಿದಲ್ಲಿ, ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.