ಜಿಲ್ಲೆ

ಹೊನ್ನಾಳಿ ಪುರಸಭೆಗೆ ಲೀಲಾವತಿ ಮುಖ್ಯಾಧಿಕಾರಿ

ಹೊನ್ನಾಳಿ: ಹೊನ್ನಾಳಿ ಪುರಸಭೆಗೆ ನೂತನ ಮುಖ್ಯಾಧಿಕಾರಿಯಾಗಿ ಟಿ.ಲೀಲಾವತಿ ಅವರು ಗುರುವಾರ ಅಧಿಕಾರ ವಹಿಸಿಕೊಂಡರು.

ಕೊಪ್ಪ ಪುರಸಭೆಯಿಂದ ವರ್ಗಾವಣೆಯಾಗಿ ಹೊನ್ನಾಳಿಗೆ ಮುಖ್ಯಾಧಿಕಾಯಾಗಿ ಆಗಮಿಸಿದ್ದು, ಈವರೆಗೆ ಪ್ರಭಾರ ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿ ವ್ಯವಸ್ಥಾಪಕಿ ಎಚ್.ನಿಂಜನಿ ಅವರು ಅಧಿಕಾರ ಹಸ್ತಾಂತರಿಸಿದರು.

ಟಿ.ಲೀಲಾವತಿ ಮಾತನಾಡಿ, ವಿಶೇಷವಾಗಿ ಖಾತೆ ಬದಲಾವಣೆ, ಇ-ಸ್ವತ್ತು ಬಗ್ಗೆ ಹೆಚ್ಚು ದೂರುಗಳಿಹದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಗಮನ ಹರಿಸಲಾಗುವುದು. ಸಾರ್ವಜನಿಕರ ಕೆಲಸ, ಕಾರ್ಯಗಳನ್ನು ಶೀಘ್ರವೇ ಇತ್ಯರ್ಥ ಮಾಡಿಕೊಡಲು ಆದ್ಯತೆ ನೀಡಲಾಗುವುದು. ನಗರ ಸ್ವಚ್ಛತೆ, ನೀರು, ಬೀದಿ ದೀಪಗಳ ವ್ಯವಸ್ಥೆಗಳ ಸುಧಾರಣೆ ಬಗ್ಗೆ ಕೂಡ ಗಮನ ಹರಿಸಲಾಗುವುದು ಎಂದು ಹೇಳಿದರು.

ಕಚೇರಿ ವ್ಯವಸ್ಥಾಪಕಿ ಎಚ್.ನಿರಂಜನಿ, ಆರೋಗ್ಯ ನಿರೀಕ್ಷಕರಾದ ಪರಮೇಶ್ವರ ನಾಯ್ಕ, ಹರ್ಷವರ್ಧನ್ ಇತರರಿದ್ದರು.