ಜಿಲ್ಲೆ

ಹೊನ್ನವಳ್ಳಿಯಲ್ಲಿ ಗ್ರಾಮಸಭೆ

 ಅರಕಲಗೂಡು: ಮಂದಗತಿಯಲ್ಲಿ ಸಾಗಿರುವ ಕುಡಿಯುವ ನೀರಿನ (ಜಲ ಜೀವನ್ ಮಿಷನ್)ಯೋಜನೆ ಕಾಮಗಾರಿ ಅಧ್ವಾನವಾಗಿದ್ದು, ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.ಸಮೀಪದ ಹೊನ್ನವಳ್ಳಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ನಾಗರಿಕರು ನೀರಿನ ಯೋಜನೆ ಗುತ್ತಿಗೆದಾರ ಮತ್ತು ಇಂಜಿನಿಯರ್ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು. ಕಳೆದ ಒಂದು ವರ್ಷದಿಂದ

ತೆವಳುತ್ತಿರುವ ಜಲ ಜೀವನ್ ಮಿಷನ್ ಕಾಮಗಾರಿಗಾಗಿ ಸುಸ್ಥಿತಿಯಲ್ಲಿದ್ದ ರಸ್ತೆಗಳನ್ನು ಅಗೆಯಲಾಗಿದೆ. ಮರು ಕಾಮಗಾರಿ ಕೈಗೊಂಡಿಲ್ಲ. ನಿಗದಿತ ಅವಧಿಗೆ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ಗ್ರಾಮಸ್ಥರು ನೇರ ಆರೋಪ ಮಾಡಿದರು. ಗ್ರಾಪಂ ಅಧ್ಯಕ್ಷ ಎಚ್.ಡಿ. ಕೃಷ್ಣಮೂರ್ತಿ ಮಾತನಾಡಿ, ಊರ ಹೊರ ಭಾಗದಲ್ಲಿ ನಿರ್ಮಿಸುತ್ತಿರುವ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿಯನ್ನೂ ನಿಗದಿತ ಅವಧಿಯೊಳಗೆ ಸಂಬಂಧಪಟ್ಟವರು ಪೂರ್ಣಗೊಳಿಸಿಲ್ಲ. ಗುತ್ತಿದಾರನ ನಿರ್ಲಕ್ಷ್ಯದಿಂದ ಕಾಮಗಾರಿ ದಾರಿತಪ್ಪಿದೆ ಎಂದು ಕಿಡಿಕಾರಿದರು.