ಕಲಬುರಗಿ: ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಾಂಸ್ಕೃತಿಕ ಭವನದಲ್ಲಿ ಶ್ರೀ ಶಿವಲಿಂಗೇಶ್ವರ ಸಂಗೀತ ಮತ್ತು ಸಾಂಸ್ಕೃತಿಕ ಸೇವಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಬುರಗಿ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಶ್ರಾವಣ ಮಾಸದ ನಿಮಿತ್ಯ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಷ.ಬ್ರ. ಚಂದ್ರಗುಂಡ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಂಗೀತವನ್ನು ಶ್ರವಣ ಮಾಡುವುದರಿಂದ ಮಾನಸಿಕ ನೆಮ್ಮದಿಯಿಂದ ಬಾಳುವಂತಾಗುತ್ತದೆ ಜೀವನದಲ್ಲಿ ಕಷ್ಟ ಸುಖ ಎರಡು ಬರುತ್ತವೆ. ಆನಂದಮಯ ಜೀವನ ಸಾಗಿಸಲು ಸಂಗೀತ ಹಾಡಲು ಮತ್ತು ಕೇಳಲು ಇಂದಿನ ಜೀವನದಲ್ಲಿ ಅವಶ್ಯಕತೆ ಇದೆ ಎಂದು ವಿಧ್ಯಾರ್ಥಿಗಳಿಗೆ ಹಿತನುಡಿ ಹೇಳಿದರು.
ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮಲ್ಲಿನಾಥ ಕೆ. ಬೂಸ ಜ್ಯೋತಿ ಬೆಳಗಿಸುವದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಸಿದ್ರಾಮಪ್ಪ ಪೊಲೀಸ್ ಪಾಟೀಲ ಕುಕನೂರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ, ವೀರಶೈವ ಸಮಾಜದ ಶಹಬಾದ ತಾಲೂಕು ಅಧ್ಯಕ್ಷ ಶರಣಬಸಪ್ಪ ಕೋಬಾಳ ವೇದಿಕೆಯಲ್ಲಿದ್ದರು. ಸಂಗೀತ ಸೇವೆಯನ್ನು ಹಿಂದೂಸ್ಥಾನಿ ಗಾಯಕರಾದ ಪಂ. ನಾಗಲಿಂಗಯ್ಯ ವಸ್ತçದಮಠ ಚೌಡಾಪುರ ಹಾಗೂ ಆಕಾಶವಾಣಿ ಕಲಾವಿದ ತತ್ವಪದ ಗಾಯಕ ಶಿವಾನಂದ ಸಿದ್ರಾಮಪ್ಪ ಪೋ. ಪಾಟೀಲ ಮತ್ತು ತಬಲವಾದನ ಶ್ರೀ ಪ್ರಶಾಂತ ವಸ್ತçದಮಠ ಅವರು ಸಲ್ಲಿಸಿದರು. ಶ್ರೀ ಕರಿಬಸವೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆಯ ವಿಧ್ಯಾರ್ಥಿಗಳು ವೇದಘೋಷ ಮಾಡಿದರು. 10ನೇ ತರಗತಿ ವಿಧ್ಯಾರ್ಥಿನಿಯರು ಪ್ರಾರ್ಥನೆಗೀತೆ ಹಾಡಿದರು. ಕರಿಬಸವೇಶ್ವರ ಪ್ರೌಧಶಾಲೆಯ ಶಿಕ್ಷಕರಾದ ಕಾಶಿನಾಥ ಬೆನಕನಳ್ಳಿ ಸ್ವಾಗತಿಸಿದರು. ಶ್ರೀ ಕರಿಬಸವೇಶ್ವರ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸಿದ್ದಮಲ್ಲಯ್ಯ ಯಂಕಂಚಿ ವಂದಿಸಿದರು. ನಿರುಪಣೆಯನ್ನು ಬಸವರಾಜ ಚೆಟ್ಟಿ ಮಾಡಿದರು.