ಹೊನ್ನಾವರ: ತಾಲೂಕಿನ ಹಳದೀಪುರದ ನವಿಲಗೋಣ ಕ್ರಾಸ್ ಬಳಿ ಮಂಗಳವಾರ ರಾತ್ರಿ ಎರಡು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ನಲ್ಲಿ ಇಸ್ರೇಲ್ ಪ್ರಜೆ ಸೇರಿದಂತೆ ಒಟ್ಟೂ ನಾಲ್ಕು ಜನರು ಗಾಯಗೊಂಡಿದ್ದಾರೆ. ಅಪಘಾತದ ತಿವ್ರತೆಗೆ ಒಂದು ಬೈಕ್ ಗೆ ಬೆಂಕಿ ಹೊತ್ತಿಕೊಂಡಿದೆ.
ದ್ವಿಚಕ್ರ ವಾಹನದಲ್ಲಿದ್ದ ಹಳದೀಪುರದ ಕೃಷ್ಣ ಗೌಡ, ದೇವಿದಾಸ ಗೌಡ, ಅಂಕೋಲಾದ ವಿವೇಕಾನಂದ ಖಾರ್ವಿ, ಶಿರಸಿಯ ಶ್ರೀನಿವಾಸ ಶೆಟ್ಟಿ ಹಾಗೂ ಇನ್ನೊಂದು ಬೈಕ್ ನಲ್ಲಿದ್ದ ಇಸ್ರೇಲ್ ಮೂಲದ ವಿದೇಶಿ ಪ್ರವಾಸಿಗ ರಾಯ್ ಲೇವಿ ಎನ್ನುವವರು ಗಾಯಗೊಂಡಿದ್ದಾರೆ.
ಹರಿಯಾಣ ನೊಂದಣೆ ಸಂಖ್ಯೆ ಹೊಂದಿರುವ ಬೈಕ್ ಅತಿವೇಗದಿಂದ ಚಲಾಯಿಸಿಕೊಂಡು ಬಂದು ಸ್ಥಳಿಯರು ಸಂಚರಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡಿದಿದೆ ಎಂದು ಸ್ಥಳಿಯರು ಇಸ್ರೇಲ್ ಪ್ರಜೆಯ ವಿರುದ್ದ ತಿರುಗಿಬಿದ್ದು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಸಾರ್ವಜನಿಕರು ಸೇರಿ ಬೆಂಕಿ ನಂದಿಸಿದ್ದಾರೆ. ಬೈಕ್ ಸವಾರರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.