ಜಿಲ್ಲೆ

ಹೊಟ್ಟೆ ನೋವು ತಾಳಲಾರದೆ ಜೆಇ ಆತ್ಮಹತ್ಯೆ

ಕಲಬುರಗಿ: ಹೊಟ್ಟೆ ನೋವು ತಾಳಲಾರದೆ ಆಳಂದ ತಾಲೂಕಿನ ಜೆಸ್ಕಾಂನ ನರೋಣಾ ಶಾಖೆಯ ಜೆಇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಂದಿಕೂರ ಗ್ರಾಮದಲ್ಲಿ ನಡೆದಿದೆ. ಆಳಂದ ತಾಲೂಕಿನ ಜೆಸ್ಕಾಂನ ನರೋಣಾ ಶಾಖೆ ಜೆಇ ಮಲ್ಲಿಕಾರ್ಜುನ ಆತ್ಮಹತ್ಯೆ ಮಾಡಿಕೊಂಡವರು. ಕೆಲ ದಿನಗಳಿಂದ ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹಲವು ಬಾರಿ ಖಾಸಗಿ ಆಸ್ಪತ್ರೆಗಳಿಗೆ ತೋರಿಸಲಾಗಿದೆ. ೧೫ ದಿನಗಳ ಹಿಂದೆ ನೌಕರಿ ತರಬೇತಿ ಎಂದು ಬೆಂಗಳೂರಿಗೆ ಹೋಗಿದ್ದರು. ಡಿ.೩೦ರಂದು ಜಮೀನಿಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋಗಿದ್ದರು. ನಂತರ ಜಮೀನಿನಲ್ಲಿನ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿz್ದÁರೆ ಎಂದು ಸಹೋದರ ಸೋಮಶೇಖರ ನೀಡಿದ ದೂರಿನಲ್ಲಿ ತಿಳಿಸಿz್ದÁರೆ. ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.