ಚಿಟಗುಪ್ಪ: ಹೊಂಡದಲ್ಲಿ ನೀರು ಕುಡಿಯಲು ಹೋಗಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಪಟ್ಟಣದ ಹೊರವಲಯದ ಫಾತ್ಮಾಪುರದಲ್ಲಿ ಶನಿವಾರ ಜರುಗಿದೆ. ಗ್ರಾಮದ ಮೊಹ್ಮದ್ ಖಾಜಾ ಅಲ್ಲೂರೆ (೨೦), ಸೈಯದ್ ಹುಸೇನ್ ಅಲ್ಲೂರೆ (೨೦) ಮೃತರು. ಮೊಹ್ಮದ್ ಖಾಜಾ ಜತೆ ಸಂಬAಧಿಯಾದ ಸೈಯದ್ ಹುಸೇನ್ ದನ ಮೇಯಿಸಲು ಹೋಗಿದ್ದಾನೆ. ತಗ್ಗಿನ್ನಲ್ಲಿದ್ದ ನೀರು ಕುಡಿಯಲು ಸೈಯದ್ ನೀರಿಗೆ ಇಳಿದಿದ್ದು, ಹೊಂಡದಲ್ಲಿ ಬಿದ್ದಿದ್ದಾನೆ. ಅವನನ್ನು ಉಳಿಸಲು ಮೊಹ್ಮದ್ ಖಾಜಾ ಮುಂದಾಗಿದ್ದಾಗ ಇಬ್ಬರೂ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ದೇಹಗಳನ್ನು ಅಗ್ನಿಶಾಮಕ ದಳದವರು ನೀರಿನಿಂದ ತೆಗೆದರು. ಘಟನಾ ಸ್ಥಳಕ್ಕೆ ತಹಸೀಲ್ದಾರ್ ರವೀಂದ್ರ ದಾಮಾ, ಪಿಎಸ್‌ಐ ಬಾಷುಮಿಯ್ಯಾ ಇತರ ಅಧಿಕಾರಿಗಳು ಭೇಟಿ ನೀಡಿದರು. ಚಿಟಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.