ಜಿಲ್ಲೆ

ಹೊಂಗನೂರಿನಲ್ಲಿ ಹನುಮ ಜಯಂತಿ

ಯಳಂದೂರು ಸಮೀಪದ ಹೊಂಗನೂರು ಗ್ರಾಮದಲ್ಲಿ ಹನುಮ ಜಯಂತಿ ನಿಮಿತ್ತ ಇತ್ತೀಚೆಗೆ ಹನುಮ ಉತ್ಸವ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಯಳಂದೂರು: ಸಮೀಪದ ಹೊಂಗನೂರು ಗ್ರಾಮದಲ್ಲಿ ಇತ್ತೀಚೆಗೆ ಹನುಮ ಜಯಂತಿ ನಿಮಿತ್ತ ಹನುಮನ ಉತ್ಸವ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಹನುಮಂತನ ಮೂರ್ತಿಗೆ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಸಲ್ಲಿಸಿ ಪಂಚಾಮೃತ ಅಭಿಷೇಕ ಮಾಡಲಾಯಿತು. ನಂತರ ಹನುಮಂತರಾಯನಿಗೆ ತುಳಸಿ ಹಾಗೂ ಹೂವಿನ ಹಾರಗಳಿಂದ ಅಲಂಕಾರ ಮಾಡಿದ್ದು ಗಮನ ಸೆಳೆಯಿತು.


ಸ್ವಾಮಿಗೆ ಕಜ್ಜಾಯ, ವಡೆ , ಚಕ್ಕುಲಿ , ಕೋಡುಬಳೆ ಹಾರ ಹಾಕಿದ ನಂತರ ದೇವಾಲಯದ ಪ್ರಧಾನ ಅರ್ಚಕ ಅನಂತ ರಾಘವನ್ ಮಹಾ ಮಂಗಳಾರತಿ ನೆರವೇರಿಸಿದರು. ನಂತರ ಹನುಮ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮುಖಂಡರಾದ ಎಚ್.ವೀರಣ್ಣ, ಯಳಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ.ಚಂದ್ರು , ಮಣಿ ಮಾಸ್ಟರ್, ಚಿನ್ನಸ್ವಾಮಿ, ಗೋಪಾಲ, ಬಾಲನಾಯ್ಕ, ಮಹದೇವ ಶೆಟ್ಟಿ , ನಾಗೇಶ , ಪ್ರಭಾಕರ್ , ಗಂಗಾಧರ , ನಾಗಶೆಟ್ಟಿ ಇತರರು ಭಾಗವಹಿಸಿದ್ದರು