ಜಿಲ್ಲೆ

ಹೈಮಾಸ್ಟ್ ದೀಪ ಅಳವಡಿಸಲು ಶಾಸಕ ಕೆ.ಎಂ.ಶಿ ಬೆಂಬಲಿಗರ ಅಡ್ಡಿ

ಅರಸೀಕೆರೆ: ತಾಲೂಕಿನ ಕಣಕಟ್ಟೆ ಹೋಬಳಿ ಶಿಶಿವಾಳ ಗ್ಯಾರಮಲ್ಲನ ಘಟ್ಟ ಪರಿಶಿಷ್ಟ ಜಾತಿಯ ಕಾಲೊನಿಗೆ ಹೈಮಾಸ್ಟ್ ದೀಪ ಅಳವಡಿಸಲು ಶಾಸಕ ಕೆ.ಎಂ.ಶಿವಲಿಂಗೇಗೌಡರ ಬೆಂಬಲಿಗರು ಅಡ್ಡಿಪಡಿಸುತ್ತಿದ್ದಾರೆ ಎಂದು ಶಶಿವಾಳ ಗ್ರಾಪಂ ಸದಸ್ಯೆ ಶಶಿಕಲಾ ಚನ್ನಬಸಪ್ಪ ಆರೋಪಿಸಿದರು

ಜಿ.ಎಸ್.ಪರಮೇಶ್ವರಪ್ಪ ಶಾಸಕರಾಗಿದ್ದ ಅವಧಿಯಲ್ಲಿ ಗ್ಯಾರಮಲ್ಲನ ಘಟ್ಟ ಬಡಾವಣೆ ಅಭಿವೃದ್ಧಿಗೆ ಚಾಲನೆ ದೊರೆತಿತ್ತು. ಇದೀಗ ಸರ್ಕಾರದಿಂದ ನೀಡಲಾಗಿರುವ ಹೈಮಾಸ್ಟ್ ವಿದ್ಯುದ್ದೀಪ ಅಳವಡಿಸುವ ಕಾರ್ಯಕ್ಕೆ ರಾಂಪುರ ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್ ಶಾಸಕರ ಬೆಂಬಲವಿದೆ ಎಂದು ಇನ್ನಿಲ್ಲದ ಕಿರಿಕಿರಿ ನೀಡುತ್ತಿದ್ದಾರೆ. ಗ್ರಾಮದ ನೀರಿನ ತೊಟ್ಟಿ ಬಳಿ ದೀಪ ಅಳವಡಿಸಿದರೆ ತೊಂದರೆಯಾಗುತ್ತದೆ ಎಂದು ಹೇಳಿದ್ದರಿಂದ ಆಕ್ರೋಶಗೊಂಡು ಪರಿಕರ ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಎಲ್ಲರಿಗೂ ಬೆಳಕು ದೊರೆಯಲಿ ಎನ್ನುವ ಉದ್ದೇಶ ನಮ್ಮದಾಗಿದ್ದು ಅಧಿಕಾರಿಗಳು ತಕ್ಷಣವೇ ಮಧ್ಯೆ ಪ್ರವೇಶಿಸಿ ನ್ಯಾಯ ದೊರಕಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದರು.


ಮತ್ತೋರ್ವಮುಖಂಡ ಮೂಡ್ಲಪ್ಪ ಮಾತನಾಡಿ, ಶಾಸಕ ಕೆ.ಎಂ.ಶಿವಲಿಂಗೇಗೌಡರ ಬೆಂಬಲಿಗರು ಎಂದು ಅಮಾಯಕರು, ಬಡವರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಮುಖಂಡ ಮಾಡಾಳು ರಮೇಶ್, ಚನ್ನಬಸಪ್ಪ ಗೋಷ್ಟಿಯಲ್ಲಿದ್ದರು.