ಚಿಂತಾಮಣಿ : ಮಹಿಳೆಯರು ಶಿಸ್ತು ಬದ್ದ ಮತ್ತು ಪ್ರಮಾಣಿಕವಾಗಿ ವ್ಯವಹಾರ ನಡೆಸುತ್ತಿರುವುದರಿಂದ ಅವರಿಗೆೆ ಡಿಸಿಸಿ ಬ್ಯಾಂಕ್ ಸೇರಿ ಹಲವು ಬ್ಯಾಂಕುಗಳು ಸಾಲ ನೀಡಲು ಮುಂದೆ ಬರುತ್ತಿವೆ ಎಂದು ಕೋಚಿಮುಲ್ ನಿರ್ದೇಶಕ ವೈ.ಬಿ.ಅಶ್ವತ್ಥನಾರಾಯಣ್ ಹೇಳಿದರು.
ತಾಲೂಕಿನ ಕರಿಯಪ್ಪಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಗುರುವಾರ ಮಾತನಾಡಿ, ಹೈನುಗಾರಿಕೆಯಲ್ಲಿ ಮಹಿಳೆಯರ ಶ್ರಮ ಅಧಿಕವಾಗಿದೆ. ಮನೆಯಲ್ಲಿ ಒಂದು ಹಸು ಸಾಕುವ ಮೂಲಕ ಒಂದು ಕುಟುಂಬ ಪೋಷಣೆ ಮಾಡುತ್ತಿರುವುದು ಉದಾಹರಣೆ. ಡೇರಿ ಮೊದಲಿಗಿಂತಲೂ ಈಗ ಅಧಿಕ ಲಾಭ ಗಳಿಸುತ್ತಿದೆ. ಜಿಲ್ಲೆಯಲ್ಲಿ 130 ಹಾಲು ಉತ್ಪಾದಕರ ಮಹಿಳಾ ಸಂಘಗಳು ಸ್ಥಾಪನೆಯಾಗಿವೆ ಎಂದರು.
ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಎಚ್.ವಿ.ತಿಪ್ಪಾರೆಡ್ಡಿ ಮಾತನಾಡಿ, ಒಂದು ಸಹಕಾರ ಸಂಘ ಅಭಿವೃದ್ಧಿಯಾಗಬೇಕಾದರೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಶ್ರಮ ಹೆಚ್ಚಾಗಿರುತ್ತದೆ. ಹಾಲಿನ ಗುಣಮಟ್ಟ ಹೆಚ್ಚಿಸಿಕೊಳ್ಳುವುದರಿಂದ ಲಾಭಗಳಿಸಬಹುದು ಎಂದು ತಿಳಿಸಿದರು.
ಉಪವ್ಯವಸ್ಥಾಪಕ ಎ.ವಿ.ಶಂಕರರೆಡ್ಡಿ, ಕೋಚಿಮುಲ್ ಚಿಕ್ಕಬಳ್ಳಾಪುರ ಜಿಲ್ಲೆ ಮಹಿಳಾ ನಿರ್ದೇಶಕಿ ಸುನಂದಮ್ಮ, ಸೈಫ್ ವಿಭಾಗದ ಉಪವ್ಯವಸ್ಥಾಪಕಿ ಆರ್.ವಿಜಯಲಕ್ಷ್ಮೀ ಮಾತನಾಡಿದರು.
ಸಂಘದ ಅಧ್ಯಕ್ಷೆ ಡಿ.ಎಸ್.ಸುನೀತಾ, ವಿಸ್ತಾರಣಾಧಿಕಾರಿ ಎಂ.ಎಸ್.ನಾರಾಯಣಸ್ವಾಮಿ, ವಸಂತಲಕ್ಷ್ಮೀ, ವೆಂಕಟೇಶ ಮೂರ್ತಿ, ಪ್ರೇಮ್ ಕಿರಣ್, ವೆಂಕಟರವಣಪ್ಪ, ಎನ್.ನಾರಾಯಣಸ್ವಾಮಿ, ಸಿಬ್ಬಂದಿ ಪ್ರತಿಭಾ, ಆರುಣ್ ಕುಮಾರಿ, ಶೋಭಾ ಇದ್ದರು.