ಜಿಲ್ಲೆ

ಹೈನುಗಾರಿಕೆ ಅಭಿವೃದ್ಧಿಗೆ ಶ್ರಮಿಸುವೆ

ಕಿಕ್ಕೇರಿ: ಗ್ರಾಮೀಣ ಭಾಗದ ರೈತರ ಬದುಕು ಕಟ್ಟಿಕೊಟ್ಟಿರುವ ಹೈನುಗಾರಿಕೆ ಅಭಿವೃದ್ಧಿಗೆ ಶ್ರಮಿಸುವೆ ಎಂದು ಮನ್ಮುಲ್ ನೂತನ ನಿರ್ದೇಶಕ ಡಾಲು ರವಿ ತಿಳಿಸಿದರು.

ಹೋಬಳಿಯ ಲಕ್ಷ್ಮೀಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಹೈನುಗಾರರು ನನ್ನನ್ನು ಹಾಗೂ ಸ್ನೇಹಿತ ಎಂ.ಡಿ.ಹರೀಶ್ ಅವರನ್ನು ಮನ್ಮುಲ್ ನಿರ್ದೇಶಕರಾಗಿ ಆಯ್ಕೆ ಮಾಡಿದ್ದೀರಿ. ನಮ್ಮ ಮೇಲೆ ಇಟ್ಟಿರುವ ಪ್ರೀತಿ, ಗೌರವಕ್ಕೆ ಆಭಾರಿ ಆಗಿದ್ದೇವೆ. ಹೈನುಗಾರರಿಗೆ ಸಿಗುವ ಸೌಲಭ್ಯ, ಸವಲತ್ತುಗಳನ್ನು ಪ್ರಾಮಾಣಿಕವಾಗಿ ನೀಡಲು ಗಮನಹರಿಸಲಾಗುವುದು ಎಂದರು.

ನಿರ್ದೇಶಕ ಎಂ.ಡಿ.ಹರೀಶ್ ಮಾತನಾಡಿ, ನಾವು ಸಹ ರೈತಾಪಿ ಕುಟುಂಬದವರಾಗಿದ್ದು, ರೈತರ ಸಂಕಷ್ಟವನ್ನು ಹತ್ತಿರದಿಂದ ಅರಿತಿದ್ದೇವೆ. ಟೀಕೆ, ಟಿಪ್ಪಣಿ ಮಾಡುವ ಬದಲು ಕಾರ್ಯವನ್ನು ಮಾಡಿ ತೋರಿಸುವುದಾಗಿ ನುಡಿದರು.

ಮನ್ಮುಲ್ ಮಾಜಿ ಅಧ್ಯಕ್ಷ ಚನ್ನಿಂಗೇಗೌಡ, ತಾಪಂ ಮಾಜಿ ಸದಸ್ಯ ಗೂಡೆಹೊಸಹಳ್ಳಿ ಜವರಾಯಿಗೌಡ, ಮುಖಂಡರಾದ ಹಾದನೂರು ಪರಮೇಶ್, ಅಂಬರೀಷ್, ರಕ್ಷಿತ್, ಸ್ವಾಮಿಗೌಡ, ಮನ್ಮುಲ್ ಉಪವ್ಯವಸ್ಥಾಪಕ ಪ್ರಸಾದ್, ಮಾರ್ಗ ವಿಸ್ತರಣಾಧಿಕಾರಿ ಗುರುರಾಜ್ ಸುರಗಿಹಳ್ಳಿ, ನಾಗಪ್ಪ ಅಲ್ಲಿಬಾವಿ, ಮಧು, ರಾಘವೇಂದ್ರ, ಭಾವನಾ, ಅಣ್ಣಪ್ಪ, ಕುಮಾರ್, ಹರೀಶ್ ಮತ್ತಿತರರಿದ್ದರು.