ಜಿಲ್ಲೆ

ಹೈದರಬಾದ್ ಹೋರಾಟ ಪಠ್ಯವಾಗಲಿ

ಬಳ್ಳಾರಿ : ಈ ಭಾಗಕ್ಕೆ ಮುಕ್ತಿ ದೊರಕಿಸಲು ನಡೆದ ಹೋರಾಟ ದೇಶದ ಸ್ವಾತಂತ್ಯ ಹೋರಾಟಕ್ಕಿಂತ ಕಡಿಮೆ ಅಲ್ಲ, ಆದ್ದರಿಂದ, ಹೈದರ್‌ಬಾದ್ ಹೋರಾಟದ ಬಗ್ಗೆ ಪಠ್ಯವಾಗಬೇಕು ಎಂದು ರಾಘವ ಸ್ಮಾರಕ ಸಂಘದ ನಿ. ಉಪನ್ಯಾಸಕ ಎನ್. ಬಸವರಾಜ ಹೇಳಿದರು.
ನಗರದ ರಾಘವ ಕಲಾಮಂದಿರ ವೃತ್ತದಲ್ಲಿ ರಂಗತೋರಣ ವತಿಯಿಂದ ಮಂಗಳವಾರ ನಡೆದ ಕಲ್ಯಾಣ ಕರ್ನಾಟಕ ಉತ್ಸವ ಹಿನ್ನಲೆಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಹೈದರಬಾದ್ ಭಾಗವಾಗಿದ್ದ ಈಶಾನ್ಯ ಕರ್ನಾಟಕ ನಿಜಾಮರ ಕ್ರೂರತನ, ರಜಾಕಾರರ ಅಟ್ಟಹಾಸದಿಂದ ನರಳುತ್ತಿತ್ತು. ಇಂತಹ ವಿಷಯ ಪಠ್ಯವಾಗಿ ಮಕ್ಕಳಿಗೆ ಹಾಗೂ ಯುವ ಪೀಳಿಗೆಗೆ ತಿಳಿದರೆ ಮತ್ತೆ ದಾಸ್ಯದಂತಹ ದಿನಗಳು ಬರಲಾರವು ಎಂದರು. ರಂಗತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಮಾತನಾಡಿದರು.