ಚಿತ್ರದುರ್ಗ: ಉತ್ತಮ ಸಮಾಜ ನಿರ್ಮಾಣಕ್ಕೆ ಹೇಮರಡ್ಡಿ ಮಲ್ಲಮ್ಮ ಸೇರಿ ಅನೇಕ ದಾರ್ಶನಿಕರು ಮಾದರಿಯಾಗಿದ್ದಾರೆ ಎಂದು ಎಂಎಲ್ಸಿ ಕೆ.ಎಸ್. ನವೀನ್ ಹೇಳಿದರು.
ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದಿಂದ ಶ್ರೀನೀಲಕಂಠೇಶ್ವರ ಸ್ವಾಮಿ ದೇಗುಲದ ಸಮುದಾಯ ಭವನದಲ್ಲಿ ಶನಿವಾರ ನಡೆದ ಹೇಮರಡ್ಡಿ ಮಲ್ಲಮ್ಮ ಜಯಂತಿ, ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.
ಕಷ್ಟಗಳನ್ನು ನೀಡಿದವರಿಗೂ ಒಳಿತನ್ನು ಬಯಸಿದ ಹೇಮರಡ್ಡಿ ಮಲ್ಲಮ್ಮ ಆದರ್ಶಗಳನ್ನು ಎಲ್ಲರೂ ಪಾಲಿಸೋಣ. ಸಮಾಜದಿಂದ ಭವನ ಅಥವಾ ವಸತಿನಿಲಯ ಕಟ್ಟಡದ ನಿರ್ಮಾಣಕ್ಕೆ ನೆರವು ನೀಡಲಾಗುವುದು. ನಿವೇಶನ ಮಂಜೂರಾತಿಗೂ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಕೆಡಿಪಿ ಸದಸ್ಯ ಕೆ.ಸಿ. ನಾಗರಾಜ್ ಮಾತನಾಡಿ, ಸಮುದಾಯದ ಮನವಿಯಂತೆ ನಿವೇಶನ ಮಂಜೂರಾತಿ ಸಂಬಂಧ ಸಿಎಂಗೆ ಮನವಿ ಮಾಡಲಾಗುವುದು. ಕಟ್ಟಡದ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಆಶ್ವಾಸನೆ ನೀಡಿದರು.
ಇದೇ ವೇಳೆ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಾಜಿ ಸೈನಿಕ ವೃಷಭೇಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು.
ಶೇಖರ್ ಗಿರಡ್ಡಿ ಉಪನ್ಯಾಸ ನೀಡಿದರು. ವೈದ್ಯರಾದ ಡಾ. ಗೀತಾ, ಡಾ. ಪಾಲಾಕ್ಷಪ್ಪ, ಮುಖಂಡರಾದ ಜಿ. ಚಿದಾನಂದಪ್ಪ, ಡಿ.ಟಿ. ಶಿವಾನಂದಪ್ಪ, ಪಿ.ಆರ್. ಸತೀಶ್, ಕೆ.ಪಿ. ಬಸವರಾಜ, ನಾಗಭೂಷಣ್, ಶಶಿಧರ್, ದಯಾನಂದ ಪಾಟೀಲ್, ಮಹಾಂತೇಶ್, ರವೀಂದ್ರ ಚಿನ್ಮಯ ರೆಡ್ಡಿ, ವಾಣಿಶ್ರೀ, ಕವಿತಾ ವೀರೇಶ್ ಇತರರಿದ್ದರು.