ಬೇಲೂರು: ಪಟ್ಟಣದಲ್ಲಿ ಬುಧವಾರ ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ಬೈಕ್ ಸವಾರರಿಗೆ ಪೊಲೀಸರು ಪಟ್ಟಣದ ವಿವಿಧೆಡೆ ದಂಡ ವಿಧಿಸಿ ಎಚ್ಚರಿಸಿದರು. ಪಟ್ಟಣದ ಬಸವೇಶ್ವರ ವೃತ್ತ, ನೆಹರು ವೃತ್ತಗಳಲ್ಲಿ ಎಎಸ್‌ಐ ನಾಗೇಶ್ ಹಾಗೂ ಸಂಚಾರ ಎಎಸ್‌ಐ ವಿರೂಪಾಕ್ಷ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಹೆಲ್ಮೆಟ್ ಇಲ್ಲದ ಬೈಕ್ ಸವಾರರನ್ನು ತಡೆದು, ದಂಡ ವಿಧಿಸಿದರು. ಹೆಲ್ಮೆಟ್ ಇಲ್ಲದೆ ಪುನಃ ರಸ್ತೆಗಿಳಿದರೆ ಬೈಕ್ ವಶಕ್ಕೆ ಪಡೆದು ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿ ಕಳುಹಿಸಿದರು.