ಜಿಲ್ಲೆ

ಹೆರಿಗೆ ವೈದ್ಯರ ನಿಯೋಜನೆಗೆ ಆಗ್ರಹ

Chamarajanagar

ಕೊಳ್ಳೇಗಾಲ: ಪಟ್ಟಣದ ಉಪವಿಭಾಗ ಸರ್ಕಾರಿ ಆಸ್ಪತ್ರೆಗೆ ಹೆಚ್ಚುವರಿ ಹೆರಿಗೆ ವೈದ್ಯರನ್ನು ನಿಯೋಜಿಸಬೇಕೆಂದು ಒತ್ತಾಯಿಸಿ ಹಿರಿಯ ನಾಗರಿಕರೊಬ್ಬರು ತಾಲೂಕು ಕಚೇರಿ ಮುಂಭಾಗ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.


ಮುಳ್ಳೂರು ಗ್ರಾಮದ ಸುರೇಶ್ ಎಂಬುವರು ಆಸ್ಪತ್ರೆ ಅವ್ಯವಸ್ಥೆ ಬರಹವುಳ್ಳ ಭಿತ್ತಿ ಚಿತ್ರ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರು ಒಬ್ಬರೇ ಇದ್ದಾರೆ. ಆದರೆ ನೂರಾರು ಸಂಖ್ಯೆಯಲ್ಲಿ ಹೆರಿಗೆ ಪ್ರಕರಣಗಳು ಬರುವುದರಿಂದ ಸೂಕ್ತ ಚಿಕಿತ್ಸೆ ಲಭಿಸುತ್ತಿಲ್ಲ. ಗ್ರಾಮೀಣ ಭಾಗದ ಜನರು ಪ್ರತಿದಿನ ಚಿಕಿತ್ಸೆಗೆಗಾಗಿ ಗಂಟೆಗಟ್ಟಲೇ ಕಾಯುವಂತಾಗಿದೆ. ಕೂಡಲೇ ಹೆಚ್ಚುವರಿ ಹೆರಿಗೆ ವೈದ್ಯರನ್ನು ನಿಯೋಜಿಸಬೇಕು.

ಆಸ್ಪತ್ರೆ ಸಿಬ್ಬಂದಿ ಕೆಲಸದ ವೇಳೆ ಸಮವಸ್ತ್ರ ಧರಿಸುವಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.