ಹೆಬ್ಬಾಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮಕ್ಕಳ ಸಂತೆಯಲ್ಲಿ ತರಕಾರಿ ಮಾರಾಟ ಮಾಡಿದರು.  
ಜಿಲ್ಲೆ

ಹೆಬ್ಬಾಲೆ ಶಾಲೆಯಲ್ಲಿ ಮಕ್ಕಳ ಸಂತೆ

ಕುಶಾಲನಗರ: ಮಕ್ಕಳಿಗೆ ದಿನನಿತ್ಯದ ವ್ಯವಹಾರಿಕ ಚಟುವಟಿಕೆಯ ಪೂರ್ವಭಾವಿಯಾಗಿ ಕೂಡುವುದು, ಕಳೆಯುವುದು ಮತ್ತು ಭಾಗಿಸುವ ಲೆಕ್ಕಗಳ ಬಗ್ಗೆ ಪರಿಕಲ್ಪನೆ ಮೂಡಿಸುವ ನಿಟ್ಟಿನಲ್ಲಿ ಹಾಗೂ ಲಾಭ ನಷ್ಟದ ಬಗ್ಗೆ ಅರಿವು ಮೂಡಿಸಲು ಮಕ್ಕಳ ಸಂತೆ ಸಹಾಯಕವಾಗಲಿದೆ ಎಂದು ಮುಖ್ಯ ಶಿಕ್ಷಕ ಎಚ್.ಎಂ.ವೆಂಕಟೇಶ್ ಅಭಿಪ್ರಾಯಪಟ್ಟರು.

ಹೆಬ್ಬಾಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಶನಿವಾರ ಆಯೋಜಿಸಿದ್ದ ಮಕ್ಕಳ ಸಂತೆ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಸಾಮಾನ್ಯವಾಗಿ ಸಂತೆಯಲ್ಲಿ ಸಿಗುವಂತ ಎಲ್ಲ ವಸ್ತುಗಳನ್ನು ತಂದು ವ್ಯಾಪಾರ ವಹಿವಾಟು ನಡೆಸಬೇಕು. ಲಾಭ ನಷ್ಟದ ಬಗ್ಗೆ ತಿಳಿವಳಿಕೆ ಪಡೆದುಕೊಂಡು, ವ್ಯವಹಾರಿಕ ಜ್ಞಾನ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.

ಶಾಲಾ ಶಿಕ್ಷಕರಾದ ಎಚ್.ಇ.ರಮೇಶ್, ಯೋಗೇಶ್, ಗುಂಡಣ್ಣ, ಸಿ.ಎಸ್.ಜಾನಕಿ, ಸಿ.ಎಂ.ಬಬಿತಾ, ಪುಷ್ಪಾವತಿ, ನೀಲಾಂಬಿಕೆ, ಶಾಲಾ ಮಕ್ಕಳು, ಅಡುಗೆ ಸಿಬ್ಬಂದಿ ವಿನೀತಾ, ಮಂಜುಳಾ ಭಾಗವಹಿಸಿದ್ದರು.