ಜಿಲ್ಲೆ

ಹೆಬ್ಬಾಲೆ ಬೋಡ್‌ನಮ್ಮೆ ಸಂಪನ್ನ

ಗೋಣಿಕೊಪ್ಪ: ಜನರಿಂದ ಬೇಡಿ ದೇವರಿಗೆ ಅರ್ಪಣೆ ಮಾಡುವ ಹಿನ್ನೆಲೆ ಹೊಂದಿರುವ ಪೊನ್ನಂಪೇಟೆ ತಾಲೂಕಿನ ಹೆಬ್ಬಾಲೆ ಬೋಡ್‌ನಮ್ಮೆ ಗುರುವಾರ ಸಂಪನ್ನಗೊಂಡಿತು.


ದೇವರಪುರ ಗ್ರಾಮದಲ್ಲಿರುವ ಅಯ್ಯಪ್ಪ ದೇವಸ್ಥಾನ ಆವರಣದಲ್ಲಿ ಭಕ್ತರು ವೇಷ ತೊಟ್ಟು, ಕುದುರೆ ಹೊತ್ತು ಕುಣಿದು ಸಂಭ್ರಮಿಸಿದರು. ಹಿನ್ನೆಲೆಯಂತೆ ಹಲವು ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಏಳು ದಿನಗಳ ಆಚರಣೆ ನಡೆಯಿತು. ವನ ದೇವಿಗಾಗಿ ಒಂದು ದಿನದ ಉಪವಾಸದ ಪಟ್ಟಣಿ ಆಚರಣೆ, ಅಯ್ಯಪ್ಪ ದೇವನಿಗೆ ಕುದುರೆ, ಬೋಟೆಕಾರನಿಗೆ ಮಣ್ಣಿನಿಂದ ತಯಾರಿಸಿದ ನಾಯಿ, ಭದ್ರಕಾಳಿಗೆ ಪ್ರಸಾದ ಅರ್ಪಿಸಲಾಯಿತು. ಅಯ್ಯಪ್ಪ ಸ್ಥಾನದ ಎದುರು ಹಲವು ವೇಷ ತೊಟ್ಟ ಸಾವಿರಾರು ಭಕ್ತಾದಿಗಳು ನೃತ್ಯದ ಮೂಲಕ ಭಕ್ತಿ ಸಮರ್ಪಿಸಿದರು.


ಜಿಲ್ಲಾಡಳಿತ ಗುರುವಾರ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು.