ಹೆದ್ದಾರಿಯಿಂದ ಸರ್ವಿಸ್ ರಸ್ತೆಯಲ್ಲಿಯಥಾ ಸ್ಥಿತಿಯಲ್ಲಿ ಮುಂದುವರೆಸುವಂತೆ ಒತ್ತಾಯಿಸಿ ಸ್ಥಳೀಯ ಗ್ರಾಮಸ್ಥರು ಪ್ರತಾಪ್ ಸಿಂಹ ಅವರಿಗೆ ಮೈಸೂರು ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಶ್ರೇಯಸ್, ಶಶಿಕುಮಾರ್, ದರ್ಶನ್, ನವೀನ್ ಇದ್ದರು. 
ಜಿಲ್ಲೆ

ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಸಂಪರ್ಕ ಕಲ್ಪಿಸಿ

ಮದ್ದೂರು: ದಶಪಥ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಹೋಗಿ ಬರಲು ಈಗಾಗಲೇ ಸಂಪರ್ಕ ಕಲ್ಪಿಸಿದ್ದು, ಇದೇ ವ್ಯವಸ್ಥೆಯನ್ನು ಮುಂದುವರಿಸಬೇಕು. ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಸ್ಥಳೀಯ ಗ್ರಾಮಸ್ಥರು ಸಂಸದ ಪ್ರತಾಪ್ ಸಿಂಹ ಅವರಿಗೆ ಮೈಸೂರು ಕಚೇರಿಯಲ್ಲಿ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ಮದ್ದೂರಿನಿಂದ ಮಂಡ್ಯದವರೆಗೆ ದಶಪಥ ರಸ್ತೆಯಿಂದ ಸರ್ವೀಸ್ ರಸ್ತೆಗೆ ಬರಲು ನಿಡಘಟ್ಟ ಗ್ರಾಮದಿಂದ ಎಚ್.ಕೆ.ಎ. ನಗರದ ಹೊರವಲಯದವರೆಗೆ ಅವಕಾಶ ಕಲ್ಪಿಸಿದ್ದು, ಈ ಮಾರ್ಗದ ರಸ್ತೆಯಲ್ಲಿ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಕಾರ್ಮಿಕರು, ಕಾರ್ಖಾನೆಗೆ ಸಾವಿರಾರು ಉದ್ಯೋಗಿಗಳು ಕರ್ತವ್ಯಕ್ಕೆ ತೆರಳುತ್ತಾರೆ. ಜತೆಗೆ ಮನ್‌ಮುಲ್ ಹಾಲು ಒಕ್ಕೂಟವಿದ್ದು ದಿನನಿತ್ಯ ಸಾವಿರಾರು ಜನರು ಈ ಮಾರ್ಗದಲ್ಲೇ ಸಂಚರಿಸುತ್ತಿದ್ದು ಸದರಿ ರಸ್ತೆಯನ್ನು ಬಂದ್ ಮಾಡಿದರೆ, ಅನನುಕೂಲ ಉಂಟಾಗಲಿದೆ. ಕೂಡಲೇ ಯಥಾಸ್ಥಿತಿ ಕಾಪಾಡಲು ರಾಷ್ತ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದರು. ಶ್ರೇಯಸ್, ಶಶಿಕುಮಾರ್, ನವೀನ್, ದರ್ಶನ್ ಮತ್ತಿತರರು ಹಾಜರಿದ್ದರು.