ಜಿಲ್ಲೆ

ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರ್ ಗೆ ಬೆಂಕಿ

Uttara Kannada - Subash Hegde

ಅಂಕೋಲಾ: ಚಲಿಸುತ್ತಿದ್ದ ಓಮ್ನಿ ಕಾರ್ ಗೆ ಬೆಂಕಿ ತಗುಲಿದ ಘಟನೆ ಬುಧವಾರ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಾಳೆಗುಳಿ ಸಮೀಪ ಘಟನೆ ನಡೆದಿದ್ದು ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.

ಮುಮುರ್ಡೇಶ್ವರದಿಂದ ಗೋವಾಕ್ಕೆ ಹೊರಟಿದ್ದ ವಾಹನಕ್ಕೆ ಬೆಂಕಿ ತಗುಲಿದೆ. ಚಾಲಕ ಕಾರಿನಿಂದ ಇಳಿದು ಬಚಾವಾಗಿದ್ದಾನೆ. ಅಂಕೋಲಾದಿಂದ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಬೆಂಕಿ‌ ನಂದಿಸಲು ಯತ್ನಿಸಿದ್ದಾರೆ.