filter: 0; fileterIntensity: 0.0; filterMask: 0; module: j; hw-remosaic: 0; touch: (-1.0, -1.0); modeInfo: ; sceneMode: SFHDR; cct_value: 0; AI_Scene: (-1, -1); aec_lux: 96.55676; hist255: 0.0; hist252~255: 0.0; hist0~15: 0.0; 
ಜಿಲ್ಲೆ

ಹೆದ್ದಾರಿಯಲ್ಲಿ ಅನಧಿಕೃತ ಪಾರ್ಕಿಂಗ್

ಮಂಜುನಾಥ್ ಹೊಸಕೋಟೆ
ನಗರದ ಮೂಲಕ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನಧಿಕೃತ ವಾಹನಗಳ ನಿಲುಗಡೆ ಯಿಂದಾಗಿ ಈ ಭಾಗ ಅಪಘಾತ ವಲಯವಾಗಿ ಮಾರ್ಪಟ್ಟಿದೆ.
ಕಳೆದ 3 ತಿಂಗಳ ಅವಧಿಯಲ್ಲಿ ಇದೇ ವ್ಯಾಪ್ತಿಯಲ್ಲಿ ಹಲವು ಅಪಘಾತ ಪ್ರಕರಣ ಸಂಭವಿಸಿದ್ದು, ಈವರೆಗೆ ನಾಲ್ವರು ಪ್ರಾಣ ತೆತ್ತಿದ್ದಾರೆ. ಆದರೂ ಈ ಅನಧಿಕೃತ ನಿಲುಗಡೆಗೆ ಕಡಿವಾಣ ಬಿದ್ದಿಲ್ಲ.
ಹೌದು… ಹೊಸಕೋಟೆ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರ ಮುಖ್ಯ ಹೆದ್ದಾರಿಯಲ್ಲೇ ವಾಹನಗಳ ಅನಧಿಕೃತ ನಿಲುಗಡೆಯಾಗುತ್ತಿದ್ದು, ಅಪಘಾತ ವಲಯವಾಗಿ ಮಾರ್ಪಾಡಾಗಿದೆ. ದ್ವಿಚಕ್ರ ವಾಹನಗಳಿಂದ ಹಿಡಿದು ಕಾರು, ಜೀಪ್ ಸೇರಿ ಖಾಸಗಿ ಬಸ್‌ಗಳು ಹಾಗೂ ಕೆಲವು ವೇಳೆ ಲಾರಿಗಳು ನಿಲುಗಡೆಯಾಗುತ್ತಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.


ಸರಣಿ ಅಪಘಾತಗಳ ಆತಂಕ: ನಗರದ ಎಂವಿಜೆ ಆಸ್ಪತ್ರೆ ಮುಂಬಾಗದಲ್ಲಿರುವ ಖಾಸಗಿ ಹೋಟಲ್ ಸರ್ವೀಸ್ ರಸ್ತೆಗೆ ಹೊಂದಿಕೊಂಡಿದ್ದು, ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ವಾಹನ ಸವಾರರು ಸರ್ವೀಸ್ ರಸ್ತೆ ಹಾಗೂ ಹೆದ್ದಾರಿಯ ಮುಖ್ಯ ರಸ್ತೆಗಳಲ್ಲೆ ವಾಹನ ನಿಲುಗಡೆ ಮಾಡಿ ಇಲ್ಲಿನ ಹೋಟೆಗಳಿಗೆ ತೆರಳುತ್ತಾರೆ, ಈ ಭಾಗದಲ್ಲಿ ಹೇಗೆಂದರೆ ಹಾಗೆ ವಾಹನಗಳನ್ನು ನಿಲುಗಡೆ ಮಾಡಿ ಹೋಗುವುದರಿಂದ ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ, ಈ ಭಾಗದಲ್ಲಿ ಹಾದು ಹೋಗುವ ವಾಹನ ಸವಾರರು ಹೋಟೆಲ್‌ಗಳನ್ನು ಕಂಡ ಕೂಡಲೇ ತಕ್ಷಣ ವಾಹನ ನಿಲುಗಡೆ ಮಾಡುತ್ತಿದ್ದು, ಹಿಂದಿನ ವಾಹನ ಸವಾರರು ಕಕ್ಕಾಬಿಕ್ಕಿಯಾಗುವ ಸನ್ನಿವೇಶಗಳು ನಿರ್ಮಾಣವಾಗುತ್ತಿದೆ. ಈ ಭಾಗದಲ್ಲಿ ಹಲವು ಬಾರಿ ಸರಣಿ ಅಪಘಾತಗಳು ಸಂಭವಿಸಿವೆಯಾದರೂ ಪೊಲೀಸರು ಎಚ್ಚೆತ್ತುಕೊಂಡಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.


ನಾಮಲಕದ ಸುತ್ತಲೇ ನಿಲುಗಡೆ: ರಸ್ತೆಬದಿಯಲ್ಲಿ ನೋ ಪಾರ್ಕಿಂಗ್ ಎಂದು ಗ್ರಾಮಾಂತರ ಪೊಲೀಸ್ ಇಲಾಖೆಯಿಂದ ನಾಮಫಲಕ ಅಳವಡಿಸಿಸಲಾಗಿದೆ, ಆದರೆ ಇದೇ ನಾಮಲಕದ ಬಳಿಯೇ ವಾಹನಗಳ ನಿಲುಗಡೆ ಸಾಮಾನ್ಯವಾಗಿದೆ, ಪ್ರತಿನಿತ್ಯ ಈ ಭಾಗದಲ್ಲಿ ಪೊಲೀಸರು ಸಂಚರಿಸುತ್ತಿದ್ದರೂ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಜಾಲತಾಣಗಳಲ್ಲಿ ಟೀಕೆ: ಇದು ನೋ ಪಾರ್ಕಿಂಗ್ ಜಾಗ, ಇಲ್ಲಿ ವಾಹನಗಳ ನಿಲುಗಡೆ ನಿಷೇಧಿಸಿದೆ ಎಂಬ ಪೊಲೀಸ್ ಇಲಾಖೆ ನಾಮಲಕದ ಬಳಿಯೇ ವಾಹನಗಳ ನಿಲುಗಡೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೆ ಕಾರಣವಾಗಿದೆ. ನೋ ಪಾರ್ಕಿಂಗ್ ನಾಮಲಕ ಹಾಕಿ ಪೊಲೀಸರು ಕೈತೊಳೆದುಕೊಂಡಿದ್ದಾರೆ, ಆದರೆ ಇದೇ ನಾಮಲಕ ಬಳಿಯೇ ನೂರಾರು ವಾಹನಗಳ ನಿಲುಗಡೆ ಮಾಡುತ್ತಿದ್ದರೂ ಪೊಲೀಸರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬ ಪೋಸ್ಟರ್‌ಗಳು ಜಾಲತಾಣಗಳಲ್ಲಿ ಹರಿದಾಡುತ್ತಿದೆ.
4ಕ್ಕೂ ಹೆಚ್ಚು ಸಾವು: ಕಳೆದ ಮೂರು ತಿಂಗಳಿಂದ ಈ ಭಾಗದಲ್ಲಿ 12ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ, ರಸ್ತೆ ಅಪಘಾತದಲ್ಲಿ 4ಕ್ಕೂ ಹೆಚ್ಚು ಪ್ರಾಣಹಾನಿಯಾಗಿದೆ ಎನ್ನಲಾಗಿದೆ. ಇದಕ್ಕೆ ಈ ಭಾಗದಲ್ಲಿ ಅನಧಿಕೃತ ನಿಲುಗಡೆಯೂ ಕಾರಣವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ನಗರದ ಎಂವಿಜೆ ಆಸ್ಪತ್ರೆಯ ಮುಂಭಾಗ ರೋಗಿಗಳು ಹಾಗೂ ರೋಗಿಗಳ ಆರೈಕೆ ಮಾಡುವವರು ರಸ್ತೆ ದಾಟಿ ಆಸ್ಪತ್ರೆಗೆ ಹೋಗಬೇಕಿದೆ, ಸದ್ಯಕ್ಕೆ ಸ್ಕೈವಾಕ್ ನಿರ್ಮಾಣ ಕಾರ್ಯ ಕುಂಟುತ್ತಾ ಸಾಗಿದೆ. ಪೊಲೀಸರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಇಲ್ಲಿನ ಅನಧಿಕೃತ ವಾಹನ ನಿಲುಗಡೆಗೆ ಬ್ರೇಕ್ ಹಾಕಬೇಕಿದೆ. ಇಲ್ಲವಾದರೆ ರಸ್ತೆ ಅಪಘಾತಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ.ವರದಾಪುರ ನಾಗರಾಜ್ಸಾಮಾಜಿಕ ಹೋರಾಟಗಾರ ಹೊಸಕೋಟೆ ಈ ಭಾಗದ ರಸ್ತೆಗಳಲ್ಲಿ ಅನಧಿಕೃತವಾಗಿ ವಾಹನಗಳ ನಿಲುಗಡೆ ಮಾಡುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಅನೇಕರು ರಸ್ತೆ ಅಪಘಾತಗಳಲ್ಲಿ ಗಾಯಗೊಂಡು ಆಸ್ಪತ್ರೆಗಳಿಗೆ ದಾಖಲಾದ ಸನ್ನಿವೇಶಗಳು ನಡೆದಿವೆ, ಪ್ರಾಣ ಕಳೆದುಕೊಂಡ ಪ್ರಕರಣಗಳೂ ನಡೆದಿವೆ. ಈ ಬಗ್ಗೆ ಪೊಲೀಸರು ಎಚ್ಚೆತ್ತುಕೊಳ್ಳಬೇಕು. ಹೆದ್ದಾರಿಯಲ್ಲಿ ಸಾಗುವ ಇನ್ನಿತರ ವಾಹನ ಸವಾರರಿಗೆ ಇದರಿಂದ ಅಪಾಯ ಎದುರಾಗಲಿದೆ.ಸುರೇಶ್ ವಾಹನ ಚಾಲಕ ಹೊಸಕೋಟೆ