ಜಿಲ್ಲೆ

ಹೆದ್ದಾರಿಯಲ್ಲಿ 6 ಮಾದರಿ ವಾಹನಗಳ ಪ್ರವೇಶ ನಿರ್ಬಂಧ

ಆರ್.ಕೃಷ್ಣ

ಮೈಸೂರು: ಮೈಸೂರು-ಬೆಂಗಳೂರಿನ ದಶಪಥದಲ್ಲಿ ದ್ವಿಚಕ್ರವಾಹನ, ಆಟೋ, ಟ್ರಾೃಕ್ಟರ್, ಎತ್ತಿನಗಾಡಿ ಸೇರಿದಂತೆ ಆರು ಮಾದರಿಯ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ನಗರದ ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ನಲ್ಲಿಯೇ ಹೆದ್ದಾರಿ ಪ್ರವೇಶಿಸುವ ಬೈಕ್, ಎತ್ತಿನಗಾಡಿ, ಟ್ರಾೃಕ್ಟರ್, ಆಟೋವನ್ನು ತಡೆದು ಸರ್ವಿಸ್ ರಸ್ತೆಯಲ್ಲಿ ತೆರಳುವಂತೆ ಪೊಲೀಸರು, ಹೆದ್ದಾರಿ ಸಿಬ್ಬಂದಿ ಮಂಗಳವಾರದಿಂದ ಸೂಚನೆ ನೀಡುತ್ತಿದ್ದಾರೆ.
ಕೆಲವರು ಸರ್ವಿಸ್ ರಸ್ತೆಯಲ್ಲಿ ತೆರಳಿದರೆ, ಮತ್ತೆ ಕೆಲವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಬಳಿಕ ಪೊಲೀಸರು ಸಮಾಧಾನಪಡಿಸಿ ಸರ್ವಿಸ್ ರಸ್ತೆಯಲ್ಲಿ ಹೋಗುವಂತೆ ಮನವೊಲಿಸಿದರು.
ದಶಪಥ ಪ್ರವೇಶ ಮಾಡುವ ದ್ವಿಚಕ್ರ ವಾಹನ ಸೇರಿದಂತೆ ಆರು ಮಾದರಿಯ ವಾಹನಗಳನ್ನು ಪ್ರಾರಂಭದಲ್ಲಿಯೇ ತಡೆದು ಸರ್ವೀಸ್ ರಸ್ತೆಯಲ್ಲಿ ತೆರಳುವಂತೆ ಸೂಚನೆ ನೀಡಲಾಗುತ್ತಿದ್ದು, ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಜಾಹ್ನವಿ ತಿಳಿಸಿದ್ದಾರೆ.