ಸಾಗರ: ರಾಷ್ಟ್ರೀಯ ಹೆದ್ದಾರಿ 206ರ ಉಳ್ಳೂರು ಗ್ರಾಮ ಪಂಚಾಯಿತಿ ಸಮೀಪದ ಹಕ್ರೆಕೊಪ್ಪ ತಿರುವಿನಲ್ಲಿ ರಸ್ತೆ ಪಕ್ಕ ಭೂಕುಸಿದಿದ್ದು ಸಂಭವಿಸಿದೆ. ಇಲ್ಲಿ ವಾಹನಗಳ ಸಂಚಾರ ಹೆಚ್ಚಿದ್ದು ಪ್ರವಾಸಿಗರು ಸಿಗಂದೂರು, ಜೋಗ ಇತರ ಸ್ಥಳಗಳಿಗೆ ಈ ರಸ್ತೆಯಲ್ಲಿಯೇ ಹೋಗುತ್ತಿರುವುದರಿಂದ ದೊಡ್ಡಮಟ್ಟದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ತಕ್ಷಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ರಿಪೇರಿ ಮಾಡಿ ಅನಾಹುತ ತಪ್ಪಿಸುವತ್ತ ಗಮನ ಹರಿಸಬೇಕು ಎಂದು ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆ ಅಧ್ಯಕ್ಷ ವಸೀಂ ಉಳ್ಳೂರು ಮನವಿ ಮಾಡಿದ್ದಾರೆ.