ಆನೇಕಲ್: ಹೆಚ್ಚುತ್ತಿರುವ ಹೆಣ್ಣು ಮಕ್ಕಳ ಮೇಲಿನ ಶೋಷಣೆ ತಡೆಗಟ್ಟಲು ಹಾಗೂ ಹೆಣ್ಣು ಮಕ್ಕಳ ರಕ್ಷಣೆ ಮತ್ತು ವಿದ್ಯಾಭ್ಯಾಸಕ್ಕಾಗಿ ರನ್ ಫಾರ್ ಹರ್ "ಕನ್ಯಾಥಾನ್' ಹೆಸರಿನಲ್ಲಿ ಭಾನುವಾರ ಮ್ಯಾರಥಾನ್ ಆಯೋಜಿಸಲಾಗಿತ್ತು.
ಬೆಂಗಳೂರು ದಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲೆಕ್ಟ್ರಾನಿಕ್ ಸಿಟಿಯ ಇನ್ಫೋಸಿಸ್ ಮೈದಾನದಲ್ಲಿ ಐಎಫ್ಐಎಂ ಕಾಲೇಜು, ಜಾಕ್ಸಾನ್ ಬಿ ಸ್ಕೂಲ್ ಹಾಗೂ ವಿಜಯ್ ಭೂಮಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 10 ಕಿ.ಮೀ.ವರೆಗಿನ ಮ್ಯಾರಥಾನ್ ಓಟದಲ್ಲಿ 2ವರ್ಷದ ಮಕ್ಕಳಿಂದ 80 ವರ್ಷದ ವೃದ್ಧರು ಸೇರಿ 8 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು.
ಬೆಳಗ್ಗೆ 6 ಗಂಟೆಗೆ ಮೈದಾನದಲ್ಲಿ ಪ್ರಾರಂಭಗೊಂಡ ಮ್ಯಾರಥಾನ್ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲ ಪ್ರದೇಶದ ಮೂಲಕ ಹಾದು ಮತ್ತೆ ಮೈದಾನಕ್ಕೆ ತಲುಪಿ ಮುಕ್ತಾಯಗೊಂಡಿತು. ಐಟಿಬಿಟಿ ಉದ್ಯೋಗಿಗಳು, ವಿದ್ಯಾರ್ಥಿಗಳು, ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು. ದಾರಿಯುದ್ದಕ್ಕೂ ನೀರು, ತಂಪು ಪಾನೀಯ ವಿತರಣೆ ಸೇರಿ ಸಂಚಾರ ದಟ್ಟಣೆಯಾಗದಂತೆ ನೂರಾರು ಸ್ವಯಂಸೇವಕರು ಕಾರ್ಯನಿರ್ವಹಿಸಿದರು.
ಐಎಫ್ಐಎಂ ಕಾಲೇಜಿನ ಪ್ರೊ.ಬಿ.ವಿ.ವೆಂಕಟೇಶ್ ಮಾತನಾಡಿ, ಕಾರ್ಯಕ್ರಮ ಆಯೋಜನೆಯಿಂದ ಸಂಗ್ರಹವಾಗುವ ಹಣದಲ್ಲಿ 5 ಸರ್ಕಾರಿ ಶಾಲೆಗಳಲ್ಲಿ ಕನ್ಯಾಥಾನ್ ಶಿಾ ಕೇಂದ್ರ ಶಾಖೆ ತೆರೆದು 300 ಸರ್ಕಾರಿ ಶಾಲಾ ಹೆಣ್ಣು ಮಕ್ಕಳಿಗೆ ಕಂಪ್ಯೂಟರ್ ಮತ್ತು ಇಂಗ್ಲಿಷ್ ಕೌಶಲ ತರಬೇತಿ ನೀಡಿ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವುದು, ಬಡ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿವೇತನ ಹಾಗೂ ಲೈಂಗಿಕ ಕಾರ್ಯಕರ್ತರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುವ ಗುರಿ
ಹೊಂದಲಾಗಿದೆ ಎಂದರು. ಮ್ಯಾರಥಾನ್ನಲ್ಲಿ 10 ಕಿಮೀ ಹಾಗೂ 5 ಕಿಮೀ ಓಟ, ಕುಟುಂಬದ ಜತೆಗೆ 3 ಕಿಮೀ ಓಟ, ಫನ್ರನ್ ವಿಭಾಗಗಳಲ್ಲಿ ವೇಗವಾಗಿ ಗುರಿ ಮುಟ್ಟಿದ ಸ್ಪರ್ಧಿಗಳಿಗೆ ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು. ಹೆಣ್ಣು ಮಕ್ಕಳಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುರುಷರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೆಣ್ಣು ಮಕ್ಕಳ ರಕ್ಷಣೆ ಮತ್ತು ವಿದ್ಯಾಭ್ಯಾಸಕ್ಕೆ ಕೈಜೋಡಿಸಿದರು.
ನಾನು ಇದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ಪ್ರತಿ ವರ್ಷ ನನಗೆ ವಿದ್ಯಾರ್ಥಿವೇತನ ಮೂಲಕ ನನ್ನ ಶಿಕ್ಷಣಕ್ಕೆ ಸಹಾಯ ಮಾಡಲಾಗುತ್ತಿದೆ. ವಿದ್ಯಾರ್ಥಿನಿಯರಿಗಾಗಿ ಪ್ರತಿ ವರ್ಷ ಓಟವನ್ನು ಆಯೋಜನೆ ಮಾಡುವುದರಿಂದ ಬರುವ ಲಾಭವನ್ನು ನಮ್ಮಂತಹ ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ.| ಹರ್ಷಿತಾ ಬಿಕಾಂ ವಿದ್ಯಾರ್ಥಿನಿ, ಮುತ್ತಾನಲ್ಲೂರು ಆನೇಕಲ್