ಮೂಡಲಗಿ : ಹೆಣ್ಣು ಮಕ್ಕಳಿಗೆ ಪಠ್ಯ ವಿಷಯದ ಜತೆಗೆ ನೈತಿಕ ಶಿಕ್ಷಣ ಕೊಡುವುದು ತುಂಬ ಮುಖ್ಯ ಎಂದು ಮೂಡಲಗಿ ದಿವಾಣಿ ಹಾಗೂ ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ ಹೇಳಿದರು.
ತಾಲೂಕಿನ ತುಕ್ಕಾನಟ್ಟಿ ಸರ್ಕಾರಿ ಮಾದರಿ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯ ವಿವಿಧೆಡೆ ಬಹಳಷ್ಟು ಬಾಲ್ಯವಿವಾಹ ನಡೆಯುತ್ತಿದ್ದು, ಇದರಿಂದ ಎಷ್ಟೋ ಬಾಲಕಿಯರ ಜೀವನ ಹಾಗೂ ಪ್ರತಿಭೆ ಕಮರಿ ಹೋಗುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಮಾತನಾಡಿ, ಪಾಲಕರು ಹೆಣ್ಣು ಮಗುವಿಗೆ ಉತ್ತಮ ಶಿಕ್ಷಣ ಕೊಡಿಸಿ ಒಳ್ಳೆಯ ಭವಿಷ್ಯ ಕಲ್ಪಿಸಿಕೊಡಬೇಕು ಎಂದು ಕರೆ ನೀಡಿದರು. ಗ್ರಾಪಂ ಅಧ್ಯಕ್ಷೆ ಗಾಯತ್ರಿ ಬಾಗೇವಾಡಿ, ಉಪಾಧ್ಯಕ್ಷೆ ಸುನಂದಾ ಭಜಂತ್ರಿ ಮಾತನಾಡಿ, ತುಕ್ಕಾನಟ್ಟಿಯಲ್ಲಿ ಸರ್ಕಾರಿ ಪ್ರೌಢಶಾಲೆ ನಿರ್ಮಿಸಬೇಕು ಎಂದು ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದರು.
ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು.
ಮುಖ್ಯಶಿಕ್ಷಕ ಎ.ವಿ. ಗಿರೆಣ್ಣವರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ವಿಮಲಾಕ್ಷಿ ತೋರಗಲ್, ಲಕ್ಷ್ಮಿ ಹೆಬ್ಬಾಳ, ಪುಷ್ಪಾ ಭರಮದೆ, ರೂಪಾ ಹೂಲಿಕಟ್ಟಿ, ಪ್ರಿಯಾಂಕಾ ಡಿ.ಕೆ., ಸುಜಾತಾ ಕೋಳಿ, ವಾಸಂತಿ ಬೋರಗುಂಡಿ, ಮಹಾದೇವ ಗೋಮಾಡಿ, ಬಸವರಾಜ ನಾಯಿಕ, ಸೋಮಶೇಖರ ವೈ.ಆರ್., ಚನ್ನಬಸಪ್ಪ ಸೀರಿ ಇತರರಿದ್ದರು. ಶಿಕ್ಷಕ ಎಂ.ಡಿ. ಗೋಮಾಡಿ ನಿರೂಪಿಸಿದರು.